ADVERTISEMENT

ಉತ್ತಮ ರಸ್ತೆಗಳಿಂದ ದೇಶದ ಪ್ರಗತಿ: ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 12:20 IST
Last Updated 13 ಮಾರ್ಚ್ 2022, 12:20 IST
ಕುಷ್ಟಗಿ ತಾಲ್ಲೂಕು ಕಂದಕೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭಾನುವಾರ ಭೂಮಿಪೂಜೆ ನೆರವೇರಿಸಿದರು
ಕುಷ್ಟಗಿ ತಾಲ್ಲೂಕು ಕಂದಕೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭಾನುವಾರ ಭೂಮಿಪೂಜೆ ನೆರವೇರಿಸಿದರು   

ಕುಷ್ಟಗಿ: ‘ದೇಶದ ಅಭಿವೃದ್ಧಿಯಲ್ಲಿ ಉತ್ತಮ ಸಂಪರ್ಕ ರಸ್ತೆಗಳ ಪಾತ್ರ ಪ್ರಮುಖವಾಗಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹45 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯು ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಬಿಡುಗಡೆಯಾದ ಅನುದಾನ ಸದ್ಬಳಕೆಯಾಗಬೇಕು. ಗುತ್ತಿಗೆದಾರರು ಈ ವಿಷಯದಲ್ಲಿ ಮುತುವರ್ಜಿವಹಿಸಬೇಕು. ಅದರೆ ಬಹುತೇಕ ಕಡೆಗಳಲ್ಲಿ ನಡೆದ ರಸ್ತೆ ಅಭಿವೃದ್ಧಿ ಕೆಲಸಗಳು ಕಳಪೆಯಾಗುತ್ತಿರುವುದು, ಕಾಟಾಚಾರದ ಕೆಲಸ ನಡೆದು ಕೆಲವೇ ದಿನಗಳಲ್ಲಿ ಪುನಃ ದುಸ್ಥಿತಿಗೆ ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅನೇಕ ಸಂದರ್ಭಗಳಲ್ಲಿ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ತಾವು ಹೇಳುತ್ತಬಂದರೂ ಕೆಲ ಗುತ್ತಿಗೆದಾರರು ಸಮರ್ಪಕ ರೀತಿಯಲ್ಲಿ ಕೆಲಸ ನಡೆಸುವುದಿಲ್ಲ. ಇದರಿಂದ ಚುನಾಯಿತ ಪ್ರತಿನಿಧಿಗಳು ಜನರಿಂದ ಬೈಸಿಕೊಳ್ಳುವಂತಾಗುತ್ತದೆ’ ಎಂದು ಹೇಳಿದರು.

ADVERTISEMENT

ಮುಖ್ಯರಸ್ತೆಯ ಬನ್ನಿಮಂಟಪದಿಂದ ಸರ್ಕಾರಿ ಪ್ರಾಥಮಿಕ ಶಾಲೆಯವರೆಗಿನ 400 ಮೀಟರ್‌ ರಸ್ತೆಯನ್ನು ಡಾಂಬರೀಕರಣಗೊಳಿಸುವುದು ಮತ್ತು ಗ್ರಾಮದಲ್ಲಿನ ಉಮಾಮಹೇಶ್ವರ ದೇವಸ್ಥಾನದಿಂದ 200 ಮೀಟರ್‌ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿ ಇದಾಗಿದೆ. ಗ್ರಾಮಸ್ಥರು ಕಾಮಗಾರಿ ಮೇಲೆ ನಿಗಾ ವಹಿಸಿ ತಮ್ಮೂರಿನ ಕೆಲಸ ಮಾದರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುತ್ತಿಗೆದಾರ ಗಿರೀಶ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಹುಳಿಮಸರು ಮತ್ತು ಸದಸ್ಯರು, ಪ್ರಮುಖರಾದ ರುದ್ರಗೌಡ ಮಾಲಿಪಾಟೀಲ, ನಾಗರಾಜ ಪೊಲೀಸ್ ಪಾಟೀಲ, ಶರಣಪ್ಪ ಬಿಜಕಲ್, ವೀರೇಶಯ್ಯ ಮಠಪತಿ, ಶಿವಶಂಕರ ಚೆನ್ನಿ, ಯಮನಪ್ಪ ಗುಮಗೇರಿ, ಶರಣಯ್ಯ ಅಬ್ಬಿಗೇರಿ, ಬಸವರಾಜ ತಾವರಗೇರಿ, ಭೀಮನಗೌಡ ಹಾಳಕೇರಿ, ಶರಣಪ್ಪ ಗೋಪಾಳಿ, ಚಂದ್ರಹಾಸ ಭಾವಿಕಟ್ಟಿ, ರಾಮಣ್ಣ ದ್ಯಾವಲಾಪುರ, ಜಗದೀಶ ಬಡಿಗೇರ, ಶರಣಪ್ಪ ಮುತ್ತಾಳ, ರವಿ ಪತ್ತಾರ, ಮಲ್ಲಪ್ಪ ಹೂಗಾರ, ಸಲೀಂಸಾಬ್ ಟೆಂಗುಂಟಿ, ಬಸವರಾಜ ತುಮ್ಮರಗುದ್ದಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.