ADVERTISEMENT

ತುಂಗಭದ್ರಾ ಜಲಾಶಯಕ್ಕೆ ವರ್ಷದೊಳಗೆ ಹೊಸ ಗೇಟ್: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 10:12 IST
Last Updated 22 ಸೆಪ್ಟೆಂಬರ್ 2024, 10:12 IST
   

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್ ಅಳವಡಿಸುವ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಒಂದು ವರ್ಷದ ಒಳಗೆ ಹೊಸ ಗೇಟ್ ಗಳನ್ನು ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ನಲ್ಲಿ ಭಾನುವಾರ ನಡೆದ ಗೇಟ್ ದುರಸ್ತಿಗೆ ಶ್ರಮಿಸಿದ ಅಧಿಕಾರಿಗಳು, ಕಾರ್ಮಿಕರಿಗೆ‌ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ಜಲಾಶಯದ ಗೇಟ್ ಕೊಚ್ಚಿ ಹೋದಾಗ ಬಿಜೆಪಿಯವರು ಅನೇಕ ಟೀಕೆ ಮಾಡಿದರು. ಈಗ ಟೀಕೆಗಳು ಸತ್ತು ಹೋಗಿದ್ದು, ನಮ್ಮ ಕೆಲಸ ಮಾತ್ರ ಉಳಿದುಕೊಂಡಿದೆ ಎಂದರು.

ADVERTISEMENT

ಕಾರ್ಮಿಕರು ಹಗಲಿರುಳು ಕೆಲಸ ಮಾಡುವ ಮೂಲಕ

ರೈತರ ಬದುಕಿಗೆ ಜೀವ ತುಂಬಿದ್ದಾರೆ. ದೇಶ ಈ ಘಟನೆಯನ್ನು ಕುತೂಹಲದಿಂದ ನೋಡುತ್ತಿತ್ತು. ಇದನ್ನು ಸಮರ್ಥವಾಗಿ ನಮ್ಮ ತಂಡ ನಿರ್ವಹಣೆ ಮಾಡಿದೆ. ಹಳೆ ಗೇಟ್ ಬದಲಾವಣೆ ಮಾಡಬೇಕು ಎಂದು ಕೇಂದ್ರದ ತನಿಖಾ ತಂಡ ವರದಿ ಕೊಟ್ಟಿದ್ದು ಅದರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.