ADVERTISEMENT

ಕೊಪ್ಪಳ: ಪ್ರಕಾಶ ಕಂದಕೂರಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:21 IST
Last Updated 13 ಜೂನ್ 2024, 15:21 IST
ಪ್ರಕಾಶ ಕಂದಕೂರು
ಪ್ರಕಾಶ ಕಂದಕೂರು   

ಕೊಪ್ಪಳ: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಸಲೋನ್‌ ನ್ಯೂಯಾರ್ಕ್‌ ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರು ಸೆರೆಹಿಡಿದ ʻವಾಟರ್‌ ವಾರ್‌ʼ ಶೀರ್ಷಿಕೆಯ ಚಿತ್ರ ಫೊಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕಾದ ಚಿನ್ನದ ಪದಕ ಪಡೆದುಕೊಂಡಿದೆ.

ಸ್ಪರ್ಧೆಯ ಪೀಪಲ್‌ (ಜನರು) ವಿಭಾಗದಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಸೆರೆಹಿಡಿಯಲಾಗಿತ್ತು. ಅಪಾಯವನ್ನು ಲೆಕ್ಕಿಸದೆ ನೀರಿಗಾಗಿ ದೊಡ್ಡ ಟ್ಯಾಂಕ್‌ ಸುತ್ತಲೂ ನೆರೆದಿರುವ ಜನಸ್ತೋಮದ ಈ ಚಿತ್ರ ನೀರಿನ ಅತ್ಯವಶ್ಯಕತೆಯನ್ನು ಮನದಟ್ಟು ಮಾಡಿಸುವಂತಿದೆ.

42 ದೇಶಗಳ 118 ಜನ ಛಾಯಾಗ್ರಾಹಕರ ಒಟ್ಟು 1,789 ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಮೆರಿಕದ ಕ್ಸಿನ್‌ ಕ್ಸಿನ್‌ ಲಿಯಾಂಗ್‌, ಭಾರತದ ಸುಬ್ರತಾ ಬಸಕ್‌, ಬಾಂಗ್ಲಾದೇಶದ ಯೂಸೂಫ್‌ ತುಷಾರ್‌ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಜೂ. 26ರಿಂದ ಜು. 26ರವರೆಗೆ ವಿಜೇತ ಛಾಯಾಚಿತ್ರಗಳ ಪ್ರದರ್ಶನ ಆನ್‌ಲೈನ್‌ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಸ್ಪರ್ಧೆಯ ಚೇರ್‌ಮನ್‌ ಮಹ್ಮದ್‌ ಅಲಿ ಸಲೀಂ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.