ADVERTISEMENT

‘ಹೆಂಡ್ತಿ ನನ್ನ ಮಾತು ಕೇಳ್ತಿಲ್ಲರ್ರಿ...’: ಜನಸಂಪರ್ಕ ಸಭೆಯಲ್ಲಿ ವೃದ್ಧರೊಬ್ಬರ ಅಳಲು

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 15:45 IST
Last Updated 19 ಜೂನ್ 2023, 15:45 IST
ಯಲಬುರ್ಗಾ ತಾಲೂಕಿನ ಉಚ್ಚಲಕುಂಟಾ ಗ್ರಾಮದಲ್ಲಿ ಸೋಮವಾರ ಶಾಸಕ ಬಸವರಾಜ ರಾಯರಡ್ಡಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವೃದ್ಧರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಯಲಬುರ್ಗಾ ತಾಲೂಕಿನ ಉಚ್ಚಲಕುಂಟಾ ಗ್ರಾಮದಲ್ಲಿ ಸೋಮವಾರ ಶಾಸಕ ಬಸವರಾಜ ರಾಯರಡ್ಡಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವೃದ್ಧರೊಬ್ಬರು ತಮ್ಮ ಅಳಲು ತೋಡಿಕೊಂಡರು.   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಸಾಹೇಬ್ರ ನನ್ನ ಹೆಂಡ್ತಿ ಒಟ್ಟಾ ಮಾತು ಕೇಳ್ತಿಲ್ಲ, ಏನರ ಹೇಳಕಾ ಹೋದ್ರ ನನ್ನ ಮ್ಯಾಲ ರೇಗ್ಯಾಡ್ತಾಳ, ಸಾಕಾಗಿ ಹೋಗೈತ್ರಿ ಸರಾ, ಏನರ ಮಾಡಿ ನಮ್ಮ ಸಮಸ್ಯೆ ಬಗೆಹರಿಸ್ರಿ... ನನ್ನ ಮಾತು ಕೇಳಂಗ ಮಾಡ್ರಿ.. ನಿಮ್ಗ ಪುಣ್ಯಾ ಬರತೈತಿ...’

ತಾಲ್ಲೂಕಿನ ಉಚ್ಚಲಕುಂಟಾ ಗ್ರಾಮದಲ್ಲಿ ಸೋಮವಾರ ಶಾಸಕ ಬಸವರಾಜ ರಾಯರಡ್ಡಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವೃದ್ಧರೊಬ್ಬರು ತಮ್ಮ ಅಳಲು ತೋಡಿಕೊಂಡರು.

ವ್ಯಕ್ತಿಯೊಬ್ಬರು ಕೌಟುಂಬಿಕ ಸಮಸ್ಯೆಯ ಇತ್ಯರ್ಥಕ್ಕೆ ಮನವಿ ಮಾಡಿಕೊಂಡಿದ್ದನ್ನು ಗಮನಿಸಿದ ಗಣ್ಯರು ಮತ್ತು ಅಧಿಕಾರಿಗಳ ಮೊಗದಲ್ಲಿ ನಗೆಯರಿಳಿತು. ರಾಯರಡ್ಡಿ ಅವರೂ ನಗುತ್ತಲೇ, ‘ನಿಮ್ಮ ಸಮಸ್ಯೆ ಬಗೆಹರಿಸೋಣ’ ಎಂದು ವೃದ್ಧರನ್ನು ಸಮಾಧಾನಪಡಿಸಿದರು.

ADVERTISEMENT

ಇದೇ ವೇಳೆ, ಮನೆ ಮಂಜೂರಾತಿಗೆ ಮನವಿ ಸಲ್ಲಿಸಲು ಬಂದಿದ್ದ ಇಬ್ಬರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ರಾಯರಡ್ಡಿ, ‘ಈ ವೃದ್ಧರ ಸಮಸ್ಯೆ ಬಗೆಹರಿಸಿದರೆ ಮಾತ್ರ ನಿಮ್ಮಿಬ್ಬರ ಸಮಸ್ಯೆಯನ್ನು ನಾನು ಬಗೆಹರಿಸುವೆ’ ಎಂದು ನಗೆಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.