ADVERTISEMENT

ಛಾಯಾಗ್ರಹಣ ಸ್ಪರ್ಧೆ: ಕಂದಕೂರಗೆ 2 ಚಿನ್ನ, 1 ಬೆಳ್ಳಿ ಪದಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:10 IST
Last Updated 30 ಜೂನ್ 2024, 14:10 IST
ಜರ್ನಲಿಸಂ ವಿಭಾಗದಲ್ಲಿ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಚಿನ್ನದ ಪದಕ ಪಡೆದ ʻದಿ ಫೀಯರ್‌ʼ ಶೀರ್ಷಿಕೆಯ ಚಿತ್ರ
ಜರ್ನಲಿಸಂ ವಿಭಾಗದಲ್ಲಿ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಚಿನ್ನದ ಪದಕ ಪಡೆದ ʻದಿ ಫೀಯರ್‌ʼ ಶೀರ್ಷಿಕೆಯ ಚಿತ್ರ   

ಕೊಪ್ಪಳ: ಹಾಂಕಾಂಗ್‌ನಲ್ಲಿ ನಡೆದ ನಾಲ್ಕನೇ ಹಾಂಕಾಂಗ್‌ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ (ಎಚ್‌ಕೆಸಿಸಿಪಿಎ) ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ಚಿತ್ರಗಳು ಎರಡು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಪಡೆದುಕೊಂಡಿವೆ. 

ಸ್ಪರ್ಧೆಯ ಜರ್ನಲಿಸಂ ವಿಭಾಗದಲ್ಲಿ ಅವರ ‘ದಿ ಫೀಯರ್‌ʼ ಶೀರ್ಷಿಕೆಯ ಚಿತ್ರ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಚಿನ್ನದ ಪದಕ, ಫೊಟೋ ಟ್ರಾವೆಲ್‌ ವಿಭಾಗದಲ್ಲಿ ‘ಗವಿಸಿದ್ಧೇಶ್ವರ ರಥೋತ್ಸವ’ ಶೀರ್ಷಿಕೆಯ ಚಿತ್ರ ಗ್ಲೋಬಲ್‌ ಫೊಟೋಗ್ರಫಿಕ್‌ ಯೂನಿಯನ್‌ನ ಚಿನ್ನದ ಪದಕ ಹಾಗೂ ಕಪ್ಪು ಬಿಳುಪು ವಿಭಾಗದಲ್ಲಿ ʻಫ್ರೆಂಡ್‌ಶಿಪ್‌ʼ ಶೀರ್ಷಿಕೆ ಚಿತ್ರ ಫೆಡರೇಷನ್‌ ಆಫ್‌ ಇಂಟರ್‌ ನ್ಯಾಷನಲ್‌ ಫೊಟೋಗ್ರಫಿಕ್‌ ಆರ್ಟ್‌ನ ಬೆಳ್ಳಿ ಪದಕ ಪಡೆದುಕೊಂಡಿವೆ. ಇದಲ್ಲದೆ ಅವರ ಒಟ್ಟು 12 ಚಿತ್ರಗಳು ಪ್ರದರ್ಶನಕ್ಕೂ ಆಯ್ಕೆಯಾಗಿವೆ.

ಪ್ರಕಾಶ ಕಂದಕೂರ

ಏಷ್ಯಾದ ಪ್ರತಿಷ್ಠಿತ ಛಾಯಾಗ್ರಹಣ ಸ್ಪರ್ಧೆ ಎನಿಸಿರುವ ಇಲ್ಲಿಗೆ ಈ ಬಾರಿ 50 ದೇಶಗಳ 264 ಜನ ಛಾಯಾಗ್ರಾಹಕರ 3,793 ಚಿತ್ರಗಳು ಬಂದಿದ್ದವು. ಜುಲೈ 1ರಿಂದ 3ರ ವರೆಗೆ ಹಾಂಕಾಂಗ್‌ನ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಸಭಾಂಗಣದಲ್ಲಿ ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT