ಹನಮಸಾಗರ: ವಿಶ್ವ ಪರಿಸರ ದಿನದ ಅಂಗವಾಗಿ ವಿವಿಧ ಶಾಲೆಗಳಲ್ಲಿ ಸಸಿ ನೆಟ್ಟು ಜಾಗೃತಿ ಮೂಡಿಸಲಾಯಿತು.
ಹನುಮಸಾಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಹುಸೇನಸಾಬ್ ಇಲಕಲ್ ಮಾತನಾಡಿ, ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸಸಿಗಳನ್ನು ಮನೆ, ಹೊಲ, ಗದ್ದೆಗಳಲ್ಲಿ ನೆಡುವ ಮೂಲಕ ಅವುಗಳನ್ನು ಮಕ್ಕಳಂತೆ ಬೆಳಸಬೇಕು ಎಂದು ತಿಳಿಸಿದರು.
ಶಿಕ್ಷಕರಾದ ರಾಮಚಂದ್ರ ಬಡಿಗೇರ, ಕಿಶನರಾವ್ ಕುಲಕರ್ಣಿ, ಉಮಾಕಾಂತ ರಜಪೂತ, ಚಂದ್ರಶೇಖರ್ ಗುಳೇದ, ಗೀತಾ ಪಾಟೀಲ್, ಶಾರದಾ, ತಿಪ್ಪಣ್ಣ ಪಲ್ಕರ ಹಾಜರಿದ್ದರು.
ಪಟ್ಟಣದ ಅನ್ನದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಸಂಗಯ್ಯ ವಸ್ತ್ರದ, ಉಪಾಧ್ಯಕ್ಷ ಶೈಲಪ್ಪ ಮೋಟಗಿ, ಕಾರ್ಯದರ್ಶಿ ಮಲ್ಲಯ್ಯ ಕೋಮಾರಿ, ಹಿರಿಯ ನಿರ್ದೇಶಕರಾದ ಸಿದ್ದಣ್ಣ ಚಿನಿವಾಲರ, ನಿರ್ದೇಶಕ ವೀರಪ್ಪ ಮೋಟಗಿ, ಸಿದ್ಧಯ್ಯ ಬಾಳಿಹಳ್ಳಿಮಠ, ಮುಖ್ಯಶಿಕ್ಷಕರಾದ ರವಿಕಾಂತಯ್ಯ ಅಮಲಿಕೊಪ್ಪ, ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.