ADVERTISEMENT

ಕೊಪ್ಪಳ | ವಸತಿ ಪ್ರದೇಶದಲ್ಲಿ ಟವರ್‌ಗೆ ವಿರೋಧ; ‍ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:28 IST
Last Updated 15 ಮೇ 2022, 4:28 IST
ಕೊಪ್ಪಳದ ಕಲ್ಯಾಣ ಮತ್ತು ಪ್ರಗತಿ ನಗರದ ಮನೆಯ ಮೇಲೆ ಖಾಸಗಿ ಕಂಪನಿಯವರು ನಿರ್ಮಾಣ ಮಾಡುತ್ತಿರುವ ಮೊಬೈಲ್ ಟವರ್ ಕಾಮಗಾರಿ ವಿರೋಧಿಸಿ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು
ಕೊಪ್ಪಳದ ಕಲ್ಯಾಣ ಮತ್ತು ಪ್ರಗತಿ ನಗರದ ಮನೆಯ ಮೇಲೆ ಖಾಸಗಿ ಕಂಪನಿಯವರು ನಿರ್ಮಾಣ ಮಾಡುತ್ತಿರುವ ಮೊಬೈಲ್ ಟವರ್ ಕಾಮಗಾರಿ ವಿರೋಧಿಸಿ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು   

ಕೊಪ್ಪಳ: ಜನವಸತಿ ಪ್ರದೇಶ ಕಲ್ಯಾಣ ನಗರದಲ್ಲಿ ಅನಧಿಕೃತವಾಗಿ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಕಲ್ಯಾಣ ನಗರ ನಿವಾಸಿಗಳ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ ಬೆಟದೂರು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ನಗರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ಮನೆಯೊಂದರ ಮೇಲೆ ಖಾಸಗಿ ಕಂಪನಿ ಯೊಂದುಮೊಬೈಲ್ಟವರ್ನಿರ್ಮಾಣ ಮಾಡುತ್ತಿದೆ.ಇಲ್ಲಿನ ಶಾಂತವೀರಪ್ಪ ಜೋಗಿನ್ ಇವರ ಮನೆಯ ಮೂರನೇ ಮಹಡಿಯ ಮೇಲೆ ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಮೊಬೈಲ್ ಟವರ್ನಿರ್ಮಾಣ ಕೈಗೆತ್ತಿ ಕೊಂಡಿದೆ. ಈ ಹಿಂದೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆದರೂ ನಿರ್ಮಾಣ ಕಾರ್ಯ ಮುಂದುವರಿಸಿರುವುದು ಸರಿ ಯಲ್ಲ ಎಂದರು.

ADVERTISEMENT

ನಿವಾಸಿಗಳು ನಗರಸಭೆಗೆ ಈ ವಿಷಯ ಕುರಿತು ಮನವಿ ಸಲ್ಲಿಸಿದ್ದರು. ಆಗ ನಗರಸಭೆಯು ಕಾಮಗಾರಿ ನಿಲ್ಲಿಸುವಂತೆ ನೋಟೀಸ್‍ ಅನ್ನು ಸಹ ಜಾರಿ ಮಾಡಿತ್ತು. ಆಗ ಕಂಪ ನಿಯುಮೊಬೈಲ್ಟವರ್ನಿರ್ಮಾಣ ಮಾಡಲು ಆಕ್ಷೇಪಣೆ ರಹಿತ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರಿಂದ ನಗರಸಭೆಯು ಷರತ್ತು ಬದ್ಧ ನಿರಪೇಕ್ಷಣಾ ಪ್ರಮಾಣ ಪತ್ರ ನೀಡಿದೆ. ಮನೆಯ ಅಕ್ಕಪಕ್ಕದವರಿಂದ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ನಿರ್ಮಾಣ ಕಾಮಗಾರಿ ಮಾಡ ಬಾರದು ಎಂದು ಸೂಚಿಸಲಾಗಿತ್ತು ಎನ್ನಲಾಗಿದೆ.

'ಟವರ್‌ನಿಂದ ಹೊರಡುವ ತರಂಗಗಳು ಅಪಾಯಕಾರಿಯಾಗಿದ್ದು, ಜನರ ಹಾಗೂ ಪಶು, ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈಗಾಗಲೇ ಈ ಪ್ರದೇಶದ ಕೆಲವೇ ಅಡಿಗಳ ಅಂತರದಲ್ಲಿ ಇಂತಹದ್ದೇ ಒಂದುಟವರ್ನಿರ್ಮಾಣವಾಗಿದೆ. ಈ ಎರಡೂಟವರ್‌ಗಳ ಒಟ್ಟು ತರಂಗಗಳ ಹೊರಸುಸುವಿಕೆಯ ಪ್ರಮಾಣ ಎಷ್ಟು ಎಂಬುವುದರ ಬಗ್ಗೆ ಯಾರಿಗೂ ನಿಖರ ಮಾಹಿತಿ ಇಲ್ಲ' ಎಂದು ಬೆಟದರೂರ ತಿಳಿಸಿದರು.

ಮೊದಲೇ ಜನವಸತಿ ಪ್ರದೇಶವಾಗಿರುವ ಇಲ್ಲಿ ಇಂತಹ ಬೃಹತ್ಟವರ್‌ಗಳನ್ನು ನಿರ್ಮಾಣ ಮಾಡುವುದು ತುಂಬ ಅಪಾಯಕಾರಿ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇಟವರ್ನಿರ್ಮಾಣ ಕಾಮ ಗಾರಿಯನ್ನು ತಡೆಹಿಡಿಯಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು. ನಗರಸಭೆ ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಮತ್ತೊಂದು ನೋಟಿಸ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.