ADVERTISEMENT

ಹನುಮಸಾಗರ: ಗ್ರಾ.ಪಂ.ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:40 IST
Last Updated 15 ಜನವರಿ 2022, 8:40 IST
ಹನುಮಸಾಗರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಸದಸ್ಯರು ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನವನ್ನು ಹಾಲು ಉತ್ಪಾದಕರ ಸಂಘಕ್ಕೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು
ಹನುಮಸಾಗರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಸದಸ್ಯರು ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನವನ್ನು ಹಾಲು ಉತ್ಪಾದಕರ ಸಂಘಕ್ಕೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು   

ಹನುಮಸಾಗರ: ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನವನ್ನು ಹಾಲು ಉತ್ಪಾದಕರ ಸಂಘಕ್ಕೆ ಮಂಜೂರ ಮಾಡಿದ್ದಾರೆ. ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾ.ಪಂ ಸದಸ್ಯರು, ಪ್ರತಿಭಟನೆ ನಡೆಸಿದರು.

ಹಾಲು ಉತ್ಪಾದಕ ಸಂಘದ ಸದಸ್ಯರು ಈ ಹಿಂದೆ ತಮಗೆ ನಿವೇಶನವನ್ನು ಮಂಜೂರು ಮಾಡುವಂತೆ ಮನವಿ ನೀಡಿದ್ದರು.

ಸಾಮಾನ್ಯ ಸಭೆಯಲ್ಲಿ ಹಾಲು ಒಕ್ಕೂಟಕ್ಕೆ ಶಂಕ್ರಪ್ಪ ಈಶ್ವರಪ್ಪ ಚಿನಿವಾಲರ ಸಹೋದರರ ಜಮೀನು ಭೂ ಪರಿವರ್ತನೆಯಾದ ಬಳಿಕ ನಾಗರಿಕ ಸೌಲಭ್ಯದ ಅಡಿಯಲ್ಲಿ ಮೀಸಲಿಟ್ಟ ನಿವೇಶನ ಆಸ್ತಿ ಸಂಖ್ಯೆ 5011ನ್ನು ಹಾಲು ಒಕ್ಕೂಟಕ್ಕೆ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಠರಾವು ಮಾಡಿದ್ದರು. ಆದರೆ ಗ್ರಾ.ಪಂ ಹಾಲಿನ ಉತ್ಪಾದಕರ ಸಂಘಕ್ಕೆ ಅದೇ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿ ಪಂಚಾಯಿತಿ ಆಸ್ತಿ ನಂ.5010 ನಿವೇಶನವನ್ನು ಸಾಮಾನ್ಯ ಸಭೆಯಲ್ಲೂ ಚರ್ಚೆ ಮಾಡದೇ, ಠರಾವು ಪಾಸ ಮಾಡದೇ ಹಾಲು ಉತ್ಪಾದಕರ ಸಂಘಕ್ಕೆ ತಿದ್ದುಪಡಿ ನೆಪದಲ್ಲಿ ಮಂಜೂರು ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯರಾದ ರುದ್ರಗೌಡ ಗೌಡಪ್ಪನವರ, ಚಂದ್ರಶೇಖರ ಬೆಳಗಲ್, ರಮೇಶ ಬಡಿಗೇರ, ವಿಶ್ವನಾಥ ಯಾಳಗಿ, ಬಸವರಾಜ ಹಕ್ಕಿ ದೂರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.