ADVERTISEMENT

ಕೊಪ್ಪಳ: ಬೇಕೇ ಬೇಕು ಬಾರ್‌ ಬೇಕು, ಗ್ರಾಮಸ್ಥರಿಂದ ಪ್ರತಿಭಟನೆ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 16:02 IST
Last Updated 19 ಸೆಪ್ಟೆಂಬರ್ 2023, 16:02 IST
ಕುದುರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ವಿಜಯಕುಮಾರ ದಾಸರ ಹಾಗೂ ಅಲ್ಲಿನ ಕೆಲ ಗ್ರಾಮಸ್ಥರು ಕೊಪ್ಪಳದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು
ಕುದುರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ವಿಜಯಕುಮಾರ ದಾಸರ ಹಾಗೂ ಅಲ್ಲಿನ ಕೆಲ ಗ್ರಾಮಸ್ಥರು ಕೊಪ್ಪಳದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು   

ಕೊಪ್ಪಳ: ಮದ್ಯದ ಅಂಗಡಿಗಳನ್ನು ಆರಂಭಿಸಲು ಅನುಮತಿ ಕೊಡಬೇಡಿ. ಮದ್ಯ ಮುಕ್ತ ಗ್ರಾಮ ಮಾಡಿ ಎಂದು ಅನೇಕರು ಹೋರಾಟ ಮಾಡುವುದನ್ನು ಕೇಳಿರುತ್ತೀರಿ. ಆದರೆ, ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ವಿಜಯಕುಮಾರ ದಾಸರ ಹಾಗೂ ಅಲ್ಲಿನ ಕೆಲ ಗ್ರಾಮಸ್ಥರು ಜಿಲ್ಲಾಡಳಿತದ ಭವನದ ಎದುರು ಮಂಗಳವಾರ ಪ್ರತಿಭಟಿಸಿ ಬೇಕೆ ಬೇಕು ಬಾರ್‌ ಬೇಕು ಎಂದು ಘೋಷಣೆಗಳನ್ನು ಕೂಗಿದರು. ಮದ್ಯದಂಗಡಿ ಆರಂಭದಿಂದ ಸರ್ಕಾರದ ರಾಜಸ್ವ ಹೆಚ್ಚಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದಂಗಡಿ ಆರಂಭಿಸಲು ಅನುಮತಿ ಕೊಡಬೇಕು ಎಂದರು.

ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ವೈನ್‌ಶಾಪ್‌ನಿಂದ ಕುದುರಿಮೋತಿ ಗ್ರಾಮದ 30ರಿಂದ 40 ಹೋಟೆಲ್‌, ಕಿರಾಣಿ ಅಂಗಡಿಗಳು ಮತ್ತು ಪಾನ್‌ಶಾಪ್‌ಗಳಿಗೆ ಅಕ್ರಮವಾಗಿ ಮದ್ಯ ಸಾಗಾಟ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ರಾಜಸ್ವ ಸೋರಿಕೆಯಾಗುತ್ತಿದೆ. ಸಕ್ರಮವಾಗಿರುವ ಮದ್ಯದ ಅಂಗಡಿಗಳ ಮುಂದೆ ಕೆಲ ಕಿಡಿಗೇಡಿಗಳು ಪದೇ ಪದೇ ಜಗಳ ಮಾಡುತ್ತಿದ್ದು, ಅವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.