ADVERTISEMENT

ತಾವರಗೇರಾ: ಓದುಗರಿಗೆ ಹತ್ತಿರ ಆಗದ ‘ಅರಿವು’ ಕೇಂದ್ರ; ದೂಳು ಹಿಡಿದ ಪುಸ್ತಕಗಳು

ಕೆ.ಶರಣಬಸವ ನವಲಹಳ್ಳಿ
Published 17 ನವೆಂಬರ್ 2024, 4:44 IST
Last Updated 17 ನವೆಂಬರ್ 2024, 4:44 IST
<div class="paragraphs"><p>ತಾವರಗೇರಾ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ದಾಸ್ತಾನು ಕೊಠಡಿಯಲ್ಲಿ ಪುಸ್ತಕಗಳ ಚೀಲಗಳನ್ನು ಹಾಕಿರುವುದು</p></div>

ತಾವರಗೇರಾ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ದಾಸ್ತಾನು ಕೊಠಡಿಯಲ್ಲಿ ಪುಸ್ತಕಗಳ ಚೀಲಗಳನ್ನು ಹಾಕಿರುವುದು

   

ತಾವರಗೇರಾ: ಸುಸಜ್ಜಿತ ಕಟ್ಟಡ, ವಿಶಾಲವಾದ ಸ್ಥಳಾವಕಾಶ, ಬೃಹತ್‌ ಗ್ರಂಥ ಭಂಡಾರ, ಗುಣಮಟ್ಟದ ಕುರ್ಚಿ, ಟೇಬಲ್‌ಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಹೊಂದಿದ್ದರೂ ಪಟ್ಟಣದ ಅರಿವಿನ ಕೇಂದ್ರವಾದ ಗ್ರಂಥಾಲಯವು ಓದುಗರಿಂದ ದೂರವಾಗಿದೆ.

‘ತಾವರಗೇರಾ ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬೃಹತ್ ಸಂಖ್ಯೆಯ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಅವುಗಳು ದೂಳು ಹಿಡಿಯುತ್ತಿವೆ. ಈ ಸಾರ್ವಜನಿಕ ಗ್ರಂಥಾಲಯಕ್ಕೆ ನಿತ್ಯ ನೂರಾರು ಸಂಖ್ಯೆಯ ಓದುಗರು ಬರುತ್ತಾರೆ. ಆದರೆ ಈ ಗ್ರಂಥಾಲಯವು ನಿತ್ಯ ಬಾಗಿಲು ತೆರೆದಿರುವುದಿಲ್ಲ’ ಎಂದು ಓದುಗರು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

ದೂಳು ಹಿಡಿದ ಪುಸ್ತಕ, ಚೇರ್, ಟೇಬಲ್: ಗ್ರಂಥಾಲಯಕ್ಕೆ ಇಲಾಖೆ ನೀಡಿರುವ ಟೇಬಲ್, ಚೇರ್‌, ಪುಸ್ತಕಗಳು ಧೂಳು ಹತ್ತಿದ್ದು, ಎಲ್ಲಾ ಸಾಮಗ್ರಿಗಳು ಮೂಲೆಯಲ್ಲಿ ಇಡಲಾಗಿದೆ. ಒಳ ಕೋಣೆಯಲ್ಲಿರುವ ದಾಸ್ತಾನು ಕೊಠಡಿಯಲ್ಲಿ ವಿವಿಧ ಇಲಾಖೆ, ಮಹನೀಯರ ಇತಿಹಾಸ, ಸರ್ಕಾರ ಹಾಗೂ ಗ್ರಂಥಾಲಯ ಇಲಾಖೆ ನೀಡಿರುವ ಸ್ಪರ್ಧಾತ್ಮಕ ಪರೀಕ್ಷೆ, ಸಾಮಾನ್ಯ ಜ್ಞಾನ ಇತರೆ ವಿಷಯಗಳ ಪುಸ್ತಕಗಳನ್ನು ತುಂಬಿರುವ 20ಕ್ಕೂ ಹೆಚ್ಚು ಚೀಲಗಳು ಧೂಳು ತಿನ್ನುತ್ತಿವೆ. ದಾಸ್ತಾನು ಪುಸ್ತಕ ದಾಖಲಾತಿಯ ನಿರ್ವಹಣೆಯೇ ಇಲ್ಲವಾಗಿದೆ.

‘ಗ್ರಂಥಾಲಯಕ್ಕೆ ಮೇಲ್ವಿಚಾರಕರು, ಗ್ರಂಥಪಾಲಕರು ಇಲ್ಲದೇ ಅವ್ಯವಸ್ಥೆ ಆಗರವಾಗಿದೆ. ಇದರಿಂದ ವಿದ್ಯಾರ್ಥಿಗಳು, ನಿವೃತ್ತ ನೌಕರರು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನೂತನ ಕೊಠಡಿ ನಿರ್ಮಾಣವಾಗಿ ಎರಡು ಮೂರು ವರ್ಷ ಕಳೆದರೂ ಗ್ರಂಥಾಲಯದಲ್ಲಿ ಸಮಸ್ಯೆ ಮುಂದುವರೆದಿದ್ದು, ಗ್ರಂಥಾಲಯಕ್ಕೆ ಹೆಚ್ಚಿನ ದಿನಪತ್ರಿಕೆಗಳು ಬರುವುದಿಲ್ಲ’ ಎಂದು ಸ್ಥಳೀಯ ಓದುಗರು ಆರೋಪಿಸಿದ್ದಾರೆ.

ತಾವರಗೇರಾ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಅವ್ಯವಸ್ಥೆ ಕುರಿತು ಓದುಗರ ದೂರಿನ ಹಿನ್ನೆಲೆಯಲ್ಲಿ ಈಚೆಗೆ ಗ್ರಂಥಾಲಯಕ್ಕೆ ಮುಖ್ಯ ಗ್ರಂಥಾಲಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವೃತ್ತ ನೌಕರರೊಬ್ಬರು ದೂರಿದರು.

ತಾವರಗೇರಾ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಅವ್ಯವಸ್ಥೆ ಗಮನಕ್ಕೆ ಬಂದಿದ್ದು ಓದುಗರ ದೂರಿನ ಮೇರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೆಲ ದಿನಗಳಲ್ಲಿ ಗ್ರಂಥಾಲಯಕ್ಕೆ ಪೂರಕ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
–ಯಮನೂರಪ್ಪ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಕೊಪ್ಪಳ
ತಾವರಗೇರಾ ಗ್ರಂಥಾಲಯದಲ್ಲಿ ಓದುಗರಿಗೆ ಆಸನಗಳು ಕೊರತೆ ಮತ್ತು ಎರಡು ಮೂರು ಪತ್ರಿಕೆಗಳು ಮಾತ್ರ ಕಾಣುತ್ತಿವೆ.
ತಾವರಗೇರಾ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.