ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ‌ರಭಸದ ಮಳೆಯ ಆರ್ಭಟ

ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ, ಪರದಾಡಿದ ಜನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:01 IST
Last Updated 12 ಜೂನ್ 2024, 15:01 IST
   

ಕೊಪ್ಪಳ: ಹಲವು ದಿನಗಳ ಹಿಂದೆಯಷ್ಟೇ ಬಿರು ಬಿಸಿಲಿನ ಆರ್ಭಟಕ್ಕೆ ಬಳಲಿ ಬೆಂಡಾಗಿದ್ದ ಜಿಲ್ಲೆಯ ಜನರಿಗೆ ಈಗ ಭಾರಿ ಮಳೆಯ ಸಂಭ್ರಮ. ಆದರೆ ಚರಂಡಿಯಲ್ಲಿ ತುಂಬಿರುವ ತ್ಯಾಜ್ಯ ಸ್ವಚ್ಚಗೊಳಿಸದ ಕಾರಣ ಮಳೆ ಹಾಗೂ ಚರಂಡಿ ನೀರು ನಗರದ ಬಹುತೇಕ ಕಡೆ ರಸ್ತೆಯ ಮೇಲೆ ಹರಿಯಿತು.

ಇದರಿಂದಾಗಿ ದೈನಂದಿನ ಚಟುವಟಿಕೆ ಮೇಲೆ ವ್ಯಾಪಕ ಪರಿಣಾಮ ಬೀರಿತು. ರಸ್ತೆ ಮೇಲೆ ಹರಿದ ಚರಂಡಿ‌ ನೀರಿನಲ್ಲಿಯೇ ವಿದ್ಯಾರ್ಥಿಗಳು, ವಾಹನಗಳ ಸವಾರರು, ಪಾದಚಾರಿಗಳು ಸಾಗಿದರು.

ಜಿಲ್ಲಾ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದರೂ ಕೆಲ ಹೊತ್ತು ಬಿಸಿಲು ‌ಬಂದಿತ್ತು. ಆಗಾಗ ಸಾಧಾರಣವಾಗಿ ಮಳೆ ಬಂದು ಹೋಗುತ್ತಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರಂಭವಾದ ಬಿರುಸಿನ ಮಳೆಯ ಆರ್ಭಟ ಜನಜೀವನ ಮೇಲೆ ಪರಿಣಾಮ ಬೀರಿತು.

ADVERTISEMENT

ಕಿನ್ನಾಳ ರಸ್ತೆಯ ಪ್ರಗತಿ ನಗರದ ಹತ್ತಿರದ ಸಣ್ಣ ನೀರಾವರಿ ಇಲಾಖೆ ಕಚೇರಿ, ಎಚ್‌ಡಿಎಫ್ ಸಿ ಬ್ಯಾಂಕ್, ಕಿಲ್ಲೇದಾರ ಪೆಟ್…

[8:15 PM, 6/12/2024] Pramod Koppala: ಪ್ಯಾಡ್‌ ತಯಾರಿಕಾ ಘಟಕಕ್ಕೆ ನುಗ್ಗಿದ ನೀರು

ಅಸಮರ್ಪಕ ಚರಂಡಿ ನಿರ್ವಹಣೆಯಿಂದಾಗಿ ಕೊಪ್ಪಳದ ಗವಿಶ್ರೀ ನಗರದಲ್ಲಿನ ಸಂಗಿನಿ ಪ್ಯಾಡ್‌ ತಯಾರಿಕಾ ಘಟಕಕ್ಕೆ ಮಳೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಏಕಾಏಕಿ ಮಳೆ ಹೆಚ್ಚಾಗಿದ್ದರಿಂದ ಕಟ್ಟಿಕೊಂಡ ಚರಂಡಿ ನೀರು ಘಟಕಕ್ಕೆ ನುಗ್ಗಿದೆ. ಇದರಿಂದ ತಯಾರಿಯ ಹಂತದಲ್ಲಿದ್ದ ಹಾಗೂ ಮಾರುಕಟ್ಟೆಗೆ ಒಯ್ಯಲು ಸಿದ್ಧಗೊಂಡಿದ್ದ ಸಾವಿರಾರು ಪ್ಯಾಡ್‌ಗಳು ನೀರುಪಾಲಾಗಿವೆ. ಪ್ರಗತಿ ಹಂತದಲ್ಲಿದ್ದ ಘಟಕ ನೀರಿನಲ್ಲಿ ನೀರಿನಲ್ಲಿ ಮುಳುಗಿರುವುದು ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ. ಈ ಘಟನೆಗೆ ನಗರಸಭೆಯೇ ನೇರ ಹೊಣೆಯಾಗಿದ್ದು, ನಷ್ಟವನ್ನು ಅವರೇ ತುಂಬಿಕೊಡಬೇಕು ಎಂದು ಮಾಲೀಕರಾದ ಭಾರತಿ ಗುಡ್ಲಾನೂರ ಒತ್ತಾಯಿಸಿದ್ದಾರೆ.

ಅಲ್ಲಿ ಪಕ್ಕದಲ್ಲಿ ಮನೆ ಕಟ್ಟುತ್ತಿರುವವವರು ಮರಳನ್ನು ಅಲ್ಲಿ ತುಂಬಿದ್ದಾರೆ. ಹಾಗಾಗಿ ನೀರು ಹರಿಯಲು ಸಾಧ್ಯವಾಗದೆ ನೀರು ಫ್ಯಾಕ್ಟರಿಗೆ ನುಗ್ಗಿದೆ. ಫ್ಯಾಕ್ಟರಿ ಸ್ವಲ್ಪ ತಗ್ಗಿನಲ್ಲಿ ಇರುವುದರಿಂದ ಗವಿಶ್ರೀನಗರದ ಮೂರನೇ ಕ್ರಾಸಿನ ಪ್ರವೇಶ ಮಾರ್ಗದಲ್ಲಿ ಹರಿದ ನೀರೆಲ್ಲ ಇಲ್ಲಿ ಸಂಗ್ರಹಗೊಂಡು ಫ್ಯಾಕ್ಟರಿಯಲ್ಲಿನ ಯಂತ್ರ, ಕಚ್ಚಾ ವಸ್ತುಗಳು ಮತ್ತು ತಯಾರಾದ ಪ್ಯಾಡುಗಳನ್ನು ಸಂಪೂರ್ಣವಾಗಿ ಹಾಳಾಗಿದ್ದು ನೀರಿನಲ್ಲಿ ತೇಲುತ್ತಿವೆ. ಇದಕ್ಕೆ ಪರಿಹಾರ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

ನಗರದ ರೈಲ್ವೆ ನಿಲ್ದಾಣ ನವೀಕರಣಗೊಳ್ಳುತ್ತಿರುವುದರಿಂದ ಫ್ಲಾಟ್‌ ಫಾರ್ಮ್‌ ತಲುಪಲು ಅಲ್ಲೆ ಪಕ್ಕದಲ್ಲೇ ಪರ್ಯಾಯ ಮಾರ್ಗವನ್ನು ಮಾಡಲಾಗಿದೆ. ಆ ಭಾಗ ತಗ್ಗು ಪ್ರದೇಶವಾಗಿದ್ದು ಮಳೆ ನೀರಿನಿಂದ ತುಂಬಿಕೊಂಡಿದೆ. ಪ್ರಯಾಣಿಕರು ಆ ನೀರಿನಲ್ಲಿಯೇ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.