ಗಂಗಾವತಿ: ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ಭಾನುವಾರ ದಿನವಿಡಿ ಮಳೆ ಬಿಟ್ಟು,ಬಿಟ್ಟು ಬಂದಿದ್ದು ವಾಹನ ಸವಾರರು, ಪಾದಚಾರಿಗಳು ಸಂಚಾರ ಮಾಡಲು ತೊಂದರೆ ಅನುಭವಿಸಿದ ದೃಶ್ಯಗಳು ಕಂಡು ಬಂದವು.
ಬೆಳಿಗ್ಗೆ ತುಸುಹೊತ್ತು ಸೂರ್ಯ ಹೊರಬಂದು ಬಿಸಿಲು ಕಂ ಡರು, ಬಹಳ ಸಮಯ ಬಿಸಿಲು ಇರಲಿಲ್ಲ.ಕೂಡಲೇ ಮೋಡ ಕವಿದ ವಾತವರಣವಾಗಿ ಮಳೆ ಸುರಿಯಿತು.
ಇದರಿಂದ ಗಂಗಾವತಿ ನಗರ ಭಾಗದಲ್ಲಿನ ಫಾಸ್ಟ್ ಫುಡ್,ತರ ಕಾರಿ, ಹಣ್ಣು, ಜೋಗ್ಯಾರು ಸಾಮಾನು, ಟಿಫೀನ್ ಬಂಡಿ ವ್ಯಾಪಾರಸ್ಥರು ಸಾಮಾನುಗಳು ಸರಿಮಾಡಿಕೊಳ್ಳಲು ಪರ ದಾಡಿದರು. ನಿತ್ಯ ಮಳೆ ಸುರಿಯುತ್ತಿರುವ ಕಾರಣ ಕೆಲ ಮಳಿ ಗೆಗಳು ಬಂದ್ ಮಾಡಲಾಗಿತ್ತು.
ಇನ್ನೂ ಗಂಗಾವತಿ ನಗರದ ಹಲವು ವಾರ್ಡುಗಳಲ್ಲಿ ಚರಂಡಿ ಗಳಲ್ಲಿ ಹೂಳೆತ್ತದ ಕಾರಣ ಮಳೆನೀರು ಸರಗವಾಗಿ ಹರಿಯ ದೆ ದುರ್ನಾತ ಬೀರ ತೊಡಗಿದವು. ನಗರ ಸೇರಿ ಗ್ರಾಮೀಣ ಭಾಗದಲ್ಲಿ ರಸ್ತೆಬದಿ, ಖಾಲಿ ನಿವೇಶದಲ್ಲಿ ಹಾಕಲಾಗಿದ್ದ, ಪ್ಲಾ ಸ್ಟಿಕ್ ತ್ಯಾಜ್ಯ ಮಳೆನೀರಿಗೆ ತೊಯ್ದು ಗಬ್ಬನಾರಿದವು.
ಮಳೆರಾಯ, ಬಿಟ್ಟು, ಬಿಟ್ಟು ಬರುತ್ತಿರುವ ಗಾಂಧಿವೃತ್ತ, ಮ ಹಾವೀರವೃತ್ತ, ಕನಕದಾಸವೃತ್ತ, ಜುಲೈನಗರ ವೃತ್ತದಲ್ಲಿ ಜನ ಸಂಚಾರ ಕಡಿಮೆಯಿತ್ತು.
ನಿರಂತರ ಮಳೆಯಿಂದ ಆನೆಗೊಂದಿ ಪ್ರೌಢಶಾಲೆ ಸೇರಿ ಹಲ ವು ಶಾಲೆಗಳಲ್ಲಿ ನೀರುನಿಂತು ಸೊಳ್ಳೆಗಳು ಹಾವಳಿ ಹೆಚ್ಚಳ ವಾಗಿದ್ದವು. ಗ್ರಾಮೀಣ ಭಾಗದಲ್ಲಿ ನರೇಗಾ ಕೂಲಿಕಾರರು ಕೆ ಲಸಕ್ಕೆ ಮಳೆಗೆ ತೊಯ್ಸುಕೊಂಡು ಮನೆಗಳಿಗೆ ತೆರಳಿದ ದೃಶ್ಯ ಗಳು ಕಂಡಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.