ಯಲಬುರ್ಗಾ: ಜೀವಂತ ಕಲೆ ಎಂದೇ ಕರೆಯಲ್ಪಡುವ ರಂಗಭೂಮಿ ಕಲೆಯು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದಿಗೂ ತನ್ನ ಮೌಲ್ಯದೊಂದಿಗೆ ಪ್ರದರ್ಶನಗೊಳ್ಳುತ್ತಿರುವ ರಂಗಭೂಮಿ ಕಲೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಿ ಕಲಾವಿದರನ್ನು ಬೆಂಬಲಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಜಿ.ವೀರಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಸುಧಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವ ನಾಟಕಗಳನ್ನು ನೋಡಿಯೇ ಅನೇಕ ಕುಟುಂಬಗಳು ಸುಧಾರಿಸಿವೆ ಎಂದರು.
ಗಣ್ಯರಾದ ಅಂದಾನಗೌಡ ಪಾಟೀಲ, ಈಶ್ವರ ಅಟಮಾಳಗಿ ಮಾತನಾಡಿದರು. ಗುತ್ತಿಗೆದಾರ ಬಾಲಚಂದ್ರ ಸಲಭಾವಿ, ಶಂಭುಲಿಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.