ADVERTISEMENT

ಕೊಪ್ಪಳ: ಹುಲಿಗಿ ದೇವಸ್ಥಾನದ ಹುಂಡಿ; 55 ದಿನಗಳಲ್ಲಿ ₹1.12 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 17:56 IST
Last Updated 23 ಅಕ್ಟೋಬರ್ 2024, 17:56 IST
   

ಕೊಪ್ಪಳ: ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಹಿಂದಿನ 55 ದಿನಗಳಲ್ಲಿ ₹1.12 ಕೋಟಿ ನಗದು ಸಂಗ್ರಹವಾಗಿದೆ.

ದೇವಸ್ಥಾನಕ್ಕೆ ಬಂದ ಹಣ, ಚಿನ್ನಾಭರಣ ಎಣಿಕೆ ಕಾರ್ಯ ಬುಧವಾರ ರಾತ್ರಿ ತನಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಅರಗು, ಹರಳು ಮುತ್ತು ಸೇರಿದಂತೆ 134 ಗ್ರಾಂ ಚಿನ್ನ, 10 ಕೆ.ಜಿ. ಕಚ್ಚಾ ಬೆಳ್ಳಿ ಭಕ್ತರಿಂದ ದೇವಸ್ಥಾನಕ್ಕೆ ಬಂದಿದೆ.

ಆ. 28ರಂದು ಕೊನೆಯ ಬಾರಿಗೆ ಹುಂಡಿ ತೆರೆಯಲಾಗಿತ್ತು. ಅಂದಿನಿಂದ ಅಕ್ಟೋಬರ್‌ 22ರ ತನಕದ ಅವಧಿಯಲ್ಲಿ ದಸರಾ ಹಬ್ಬವೂ ಇದ್ದಿದ್ದರಿಂದ ಪ್ರತಿ ದಿನ ರಾಜ್ಯ ಹಾಗೂ ಹೊರರಾಜ್ಯಗಳ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ADVERTISEMENT

ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ಹುಲಿಗಿಗೆ ಬರುವುದು ಸಾಮಾನ್ಯ. ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಭಕ್ತರು ಕೂಡ ದೇವಸ್ಥಾನಕ್ಕೆ ಬರುವುದು ಹೆಚ್ಚಾಗಿದ್ದು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯದ ಆದಾಯವೂ ಹೆಚ್ಚಾಗುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.