ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಗುರುವಾರ ಎಣಿಕೆ ಮಾಡಲಾಯಿತು.
ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ₹28,79,910 (ಮಾ 29ರಿಂದ ಮೇ 25ರವರೆಗೆ) ಹಣ ಸಂ ಗ್ರಹವಾಗಿದೆ. ಇದರಲ್ಲಿ ನಾಲ್ಕು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.
ಇನ್ನೂ ಕಳೆದ ಬಾರಿ (ಮಾ 29)ರಂದು ಹುಂಡಿಹಣ ಎಣಿಕೆ ಮಾಡಿದ ವೇಳೆಯಲ್ಲಿ ₹ 10,64,935 ಹಣ ಸಂಗ್ರಹವಾಗಿತ್ತು. ಈ ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಿತು.
ಗ್ರೇಡ್-2 ತಹಶೀಲ್ದಾರ ವಿ.ಎಚ್. ಹೊರಪೇಟಿ, ಶಿರಸ್ತೇದಾರ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬ ಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ , ಮಹೇಶ ದಲಾಲ, ಶರಣಪ್ಪ ಬಿ., ಗುರುರಾಜ, ಶ್ರೀಕಂಠ, ಅನ್ನಪೂರ್ಣ, ನಾಗರತ್ನ, ನಾಗರತ್ನಮ್ಮ, ಶಿವಕುಮಾರ, ಗಾಯತ್ರಿ, ಸೈಯದ್, ಶ್ರೀರಾಮ, ಪಿ.ಕೆ.ಜಿ.ಬಿ ಬ್ಯಾಂಕ್ ಸಿಬ್ಬಂದಿ ರಾಜಶೇಖರ, ಸುನೀಲ, ವೆಂಕಟೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.