ಹನುಮಸಾಗರ: ಸರ್ಕಾರ ಪೂರ್ವಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ತೆರೆದಿರುವ ಆಂಗ್ಲ ಹಾಗೂ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಬೇಕು ಎಂದು ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಬಸಮ್ಮ ಪಾಟೀಲ ಹೇಳಿದರು.
ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಆವರಣದಲ್ಲಿ ಪೂರ್ವಪ್ರಾಥಮಿಕ ಕನ್ನಡ ಮಾಧ್ಯಮದ ಹೆಚ್ಚುವರಿ ವಿಭಾಗಕ್ಕೆ ಪಾಲಕರ ಸಮ್ಮುಖದಲ್ಲಿ ಲಾಟರಿ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಉಪಪ್ರಾಚಾರ್ಯ ಎಂ.ಎಸ್.ಬಡದಾನಿ ಮಾತನಾಡಿ, ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ತರಗತಿಗಳಿಗೆ ಶಿಕ್ಷಣ ಇಲಾಖೆ ವಯೋಮಿತಿ ನಿಗದಿಪಡಿಸಿದಂತೆ ಜನ್ಮದಿನಾಂಕ ಆಧಾರದ ಮೇಲೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗಿದೆ.
ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ವಿಭಾಗಕ್ಕೆ 89 ಅರ್ಜಿಗಳು ಹಾಗೂ ಯುಕೆಜಿ ವಿಭಾಗಕ್ಕೆ 64 ಅರ್ಜಿಗಳು ಬಂದಿದ್ದು, ಅದರಲ್ಲಿ ಕನ್ನಡ ಪೂರ್ವ ಪ್ರಾಥಮಿಕ ವರ್ಗಕ್ಕೆ 30 ವಿದ್ಯಾರ್ಥಿಗಳನ್ನು ಮತ್ತು ಯುಕೆಜಿ ವಿಭಾಗಕ್ಕೆ 30 ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ ಲಾಟರಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಸದಸ್ಯರಾದ ಶಿವಪ್ಪ ಕಂಪ್ಲಿ, ಮುತ್ತಣ್ಣ ಬಾಚಲಾಪೂರ, ಮುತ್ತಣ್ಣ ಪತ್ತಾರ, ಶ್ರೀಶೈಲ ಮೋಟಗಿ, ಮರೇಗೌಡ ಬೋದೂರ, ಬಸವರಾಜ ದ್ಯಾವಣ್ಣವರ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ನಂದಲಾಲ ದಲಭಂಜನ, ಎಚ್.ಎಚ್.ಇಲಕಲ್ಲ, ಪ್ರಮುಖರಾದ ಸೂಚಪ್ಪ ಭೋವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.