ಕಾರಟಗಿ: ‘ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ದೊರೆತ ಪ್ರೀತಿ, ವಿಶ್ವಾಸ ಹಾಗೂ ಸ್ಪಂದನೆಯನ್ನು ಎಂದಿಗೂ ಮರೆಯಲಾಗದು. ಉತ್ತಮ ಅನುಭವ ನೀಡಿದವರ ಋಣ ತೀರಿಸಲಾಗದು. ಮತ್ತೊಮ್ಮೆ ಅವಕಾಶ ದೊರೆತರೆ ಪಟ್ಟಣಕ್ಕೆ ಬರುತ್ತೇನೆ’ ಎಂದು ಶಿಕ್ಷಕಿ ಪಿ.ಸಲೀಮಾ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ,‘ವರ್ಗಾವಣೆಯಾಗಿದ್ದೇನೆ ಅಷ್ಟೇ, ಮಾನಸಿಕವಾಗಿ ಇಲ್ಲಿಯೇ ಇದ್ದೇನೆ. ಇಲ್ಲಿಯವರ ಹೃದಯವಂತಿಕೆ ಶಾಶ್ವತವಾಗಿ ಉಳಿಯಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಕೊಟ್ಟರೆ, ಅದೇ ನೈಜ ಸನ್ಮಾನ’ ಎಂದರು.
ಶಾಲಾ ಆಡಳಿತ ಮಂಡಳಿ ಸನ್ಮಾನಿಸಿ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಿಕ್ಷಕರಾದ ಗುರುಬಸಪ್ಪ ಪಟ್ಟಣಶೆಟ್ಟಿ, ಶರಣಯ್ಯ, ಹಜರತ್ ಬಾಗಲಿ, ಚನ್ನಬಸಪ್ಪ ಆಸ್ಪರಿ,‘ಶಿಕ್ಷಕ ವೃತ್ತಿ ಇತರ ವೃತ್ತಿಗಿಂತ ಪವಿತ್ರವಾದದ್ದಲ್ಲದೇ ಶ್ರೇಷ್ಠತೆಗೆ ಸಾಕ್ಷಿ. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಅದನ್ನು ಪಡೆದವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವರು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಅಭ್ಯಾಸ ಮಾಡಿ, ಉತ್ತಮ ಫಲಿತಾಂಶ ತಂದು ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಾಗಲೇ ಶಿಕ್ಷಕರಿಗೆ ಬಹುದೊಡ್ಡ ಗೌರವ ಸಿಕ್ಕಂತಾಗುತ್ತದೆ’ ಎಂದರು.
ಪ್ರಾಚಾರ್ಯ ಜಿ. ಅನೀಲ್‌ಕುಮಾರ, ಮುಖ್ಯಶಿಕ್ಷಕರಾದ ವಿರೂಪಾಕ್ಷಪ್ಪ ಕೋರಿ, ರಾಚೋಟಪ್ಪ, ಶಿಕ್ಷಕರಾದ ಶಕುಂತಲಾ, ದ್ರಾಕ್ಷಾಯಣಿ, ಮಂಜುನಾಥ, ಸಂಗಮೇಶ, ರಾಜಶೇಖರ್, ವಿಜಯಕುಮಾರ್, ಸಂತೋಷ ಕುಮಾರ, ತಿಮ್ಮಾರಡ್ಡಿ, ಸೋಮಲಿಂಗಪ್ಪ, ಗುರಪ್ಪಯ್ಯ, ವಿರೂಪಾಕ್ಷಪ್ಪ ಮತ್ತಿಕಟ್ಟಿ, ಮಹಾಬಳೇಶ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.