ಹನುಮಸಾಗರ: ಇಲ್ಲಿಗೆ ಸಮೀಪದ ವಾರಿಕಲ್ಲ ಗ್ರಾಮದಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಆಹಾರ ಧಾನ್ಯ ಪಡೆದುಕೊಳ್ಳುವಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ಪ್ರತಿದಿನ ತಮ್ಮ ಆಹಾರ ಧಾನ್ಯಗಳನ್ನು ಪಡೆಯಲು ಸರತಿಯಲ್ಲಿ ನಿಂತಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಸರ್ವರ್ ಸಂಪರ್ಕ ಕಡಿತವಾಗಿದ್ದು, ಆಹಾರ ಧಾನ್ಯಗಳ ವಿತರಣೆಗೆ ಅಡ್ಡಿಯಾಗುತ್ತಿದೆ.
ಈ ಕುರಿತು, ಗಡಚಿಂತಿ ಗ್ರಾಮದ ರೈತ ಚಂದಪ್ಪ ಮಾನುಟಗಿ ಮಾತನಾಡಿ,‘ಏನ ನೋಡ್ರಿ ನಾವು ಹೋಲದಲ್ಲಿ ರಾಶಿ ಮಾಡುವುದು ಬಿಟ್ಟು ಒಂದು ಕಿಲೋ ಮೀಟರ್ ನಡೆದು ಕೊಂಡ ಇಲ್ಲಿ ಬಂದ್ದವ್ರಿ, ಆದ್ರೆ ಅದು ಏನೂ ಸರ್ವರನ ಸಮಸ್ಯೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಪಂಚ ಗ್ಯಾರಂಟಿ ಸಮಿತಿಯ ಸದಸ್ಯ ಯಮನೂರಪ್ಪ ಅಬ್ಬಿಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ತಾಂತ್ರಿಕ ಸಮಸ್ಯೆ ಪರಿಹಾರವಾಗಲು ಸರ್ಕಾರದಿಂದ ಶೀಘ್ರ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.