ಗಂಗಾವತಿ: ತಾಲ್ಲೂಕಿನ ಸಿದ್ದಿಕೇರಿ ಗ್ರಾಮದ ಸಮೀಪದ ಬೆಟ್ಟದ ಮೇಲಿನ ಪುರಾತನ ಕಾಲದ ವಾಣಿಭದ್ರೇಶ್ವರ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ಗರ್ಭಗುಡಿಯಲ್ಲಿನ ಶಿವಲಿಂಗ ಮೂರ್ತಿಯನ್ನು ಧ್ವಂಸಗೊಳಿಸಿದ ಘಟನೆ ಗುರುವಾರ ಜರುಗಿದೆ.
ಬೆಳಿಗ್ಗೆ ಅರ್ಚಕರು ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಗ್ರಾಮೀಣ ಠಾಣೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ವಾಣಿಭದ್ರೇಶ್ವರ ದೇವಸ್ಥಾನವನ್ನು ಹಂಪಿ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿದ್ದಿಕೇರಿ ಗ್ರಾಮ ಸಮೀಪದ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಇದು ವಿಜಯನಗರ ಕಾಲದಲ್ಲಿ ನಿರ್ಮಿಸಿ ದೇವಸ್ಥಾನವಾದ ಕಾರಣ ನಿಧಿ ಇರಬಹುದೆಂದು ದುಷ್ಕರ್ಮಿಗಳು ಶಿವಲಿಂಗ ಮೂರ್ತಿ ಧ್ವಂಸಗೊಳಿಸಿ ಹೊತ್ತೊಯ್ದಿದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.