ಗಂಗಾವತಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗಂಗಾವತಿ ತಾಲ್ಲೂಕು ಶೇ 92.15 ರಷ್ಟು ಫಲಿತಾಂಶ ಪಡೆಯುವ ಮೂಲಕ ಇದೇ ಮೊದಲ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ಕಳೆದ ಬಾರಿ ಗಂಗಾವತಿ ತಾಲ್ಲೂಕು ಶೇ 86 ರಷ್ಟು ಫಲಿತಾಂಶ ಪಡೆದಿತ್ತು. ಆದರೆ ಈ ಬಾರಿ ಕೊಪ್ಪಳ (ಶೇ 84.63), ಯಲಬುರ್ಗಾ (ಶೇ 90.03), ಕುಷ್ಟಗಿ (ಶೇ 89.72) ಮೀರಿಸಿ ಶೇ 92.15 ರಷ್ಟು ಫಲಿತಾಂಶ ಪಡೆದಿದೆ. 10ಕ್ಕೂ ಹೆ ಚ್ಚು ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ.
ಕೋವಿಡ್ ವೇಳೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಠ್ಯ ಬೋಧನೆ ಮಾಡಲು ಆಗದ ಕಾರಣ ಫಲಿತಾಂಶದಲ್ಲಿ ಹಿನ್ನಡೆಯಾಗಿತ್ತು. ಮಕ್ಕಳಲ್ಲಿ ಕೌಶಲ ಕೊರತೆ ಎದುರಾಗಿತ್ತು. ಈ ಬಗ್ಗೆ ಇಲಾಖೆ ಕಾಳಜಿವಹಿಸಿ ಬೋಧನೆಗೆ ವಿಶೇಷ ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿತ್ತು.
ಅದರಂತೆ ಬಿಇಒ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಪ್ರೌಢಶಾಲಾ ಶಿಕ್ಷಕರಿಗಿರುವ ಗೊಂದಲ, ಬೋಧಿಸುವ ವಿಧಾನದ ಕುರಿ ತು ವಿಷಯ ವೇದಿಕೆಯಡಿ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಿ, ನಂತರ ಪರೀಕ್ಷೆ ಫಲಿತಾಂಶ, ಪ್ರಶ್ನೆ ಬಿಡಿಸುವ ಕುರಿತು, ಸರಣಿ ಪರೀಕ್ಷೆಗಳ ಕುರಿತು ಚರ್ಚೆ ಮಾಡಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಠ್ಯ ಬೋಧಿಸುವಂತೆ ಮಾಡಿಸಿದ್ದಾರೆ.
ತಾಲ್ಲೂಕಿನಲ್ಲಿ ವಿಷಯವಾರು 40 ಸಂಪನ್ಮೂಲ ಶಿಕ್ಷಕರ ತಂಡ ರಚಿಸಿ ಅವರಿಂದ 120 ಗಂಟೆಗಳ ಮೌಲ್ಯಯುತ ಪಠ್ಯದ ಪಿಪಿಟಿ ರಚಿಸಿ, ಪ್ರೌಢ ಶಾಲೆಗಳಲ್ಲಿನ ಸ್ಮಾರ್ಟ್‌ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುಖ್ಯವಾಗುವ ಪಠ್ಯ, ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆ ಬಿಡಿಸುವ ಬಗ್ಗೆ ಪ್ರದರ್ಶನದ ಮೂಲಕ ತಿಳಿಸಿಕೊಡಲಾಗಿದೆ.
ಪಾಸಿಂಗ್ ಪ್ಯಾಕೇಜ್: ಕಲಿಕಾ ಸಾಮರ್ಥ್ಯ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಶೇ 50ರಷ್ಟು ಅಂಕಗಳಿಸುವಷ್ಟು ಪಠ್ಯ ಸಿದ್ಧಪಡಿಸಿ ಬೋಧಿಸುವುದು. ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು 5 ಹಂತದಲ್ಲಿ ಪರೀಕ್ಷೆ ನಡೆಸಿ, ಮೊದಲ 2 ಹಂತದಲ್ಲಿ ಪ್ರಶ್ನೆ ಪತ್ರಿಕೆ ಜೊತೆಗೆ ಪುಸ್ತಕ ನೀಡಿ ಉತ್ತರ ಹುಡಿಕಿಸಿ ಬರೆಸಿದರೆ, ಉಳಿದ 3 ಹಂತದಲ್ಲಿ ಸ್ವಯಂ ಆಗಿ ಮಕ್ಕಳಿಗೆ ಉತ್ತರ ಬರೆಯಿಸಿ ಆತ್ಮವಿಶ್ವಾಸ ಹೆಚ್ಚಿಸಲಾಗಿದೆ.
ಫೋನ್‌ಇನ್ ಕಾರ್ಯಕ್ರಮ: ಪ್ರೌಢ ಶಾಲೆ ಶಿಕ್ಷಕರನ್ನು ತಂಡಗಳಾಗಿ ವಿಂಗಡಿಸಿ ವಿದ್ಯಾರ್ಥಿಗಳನ್ನು ದತ್ತು ಪಡೆದು, ನಿತ್ಯ ಬೆ ಳಿಗ್ಗೆ 5ಕ್ಕೆ ಪೋನ್ ಕರೆ ಮಾಡಿ ಓದಲು ತಿಳಿಸಿ, ಸ್ಷಷ್ಟವಾಗಿ ಓದುವ, ಶುದ್ಧವಾಗಿ ಬರೆಯುವ, ನೆನಪಿನ ಶಕ್ತಿ ಹೆಚ್ಚಿಸುವ ಕೆಲ ಸವನ್ನು ಶಿಕ್ಷಕರು ಮಾಡುತ್ತಾರೆ.
ಪರೀಕ್ಷೆ ಒಂದು ಹಬ್ಬ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಪರೀಕ್ಷೆ ಒಂದು ಹಬ್ಬ ಎಂಬ ಕಾ ರ್ಯಕ್ರಮ ಮಾಡಿ, 2-3 ಶಾಲೆಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಧೈರ್ಯ ತುಂಬುವುದು, ಉತ್ತರ ಬರೆಯುವ ವಿಧಾನ, ಓದಿದ ವಿಷಯದ ಪುನರಾವರ್ತನೆ, ಪರೀಕ್ಷೆ ಸಿದ್ಧತೆ ಬಗ್ಗೆ ಮಾಹಿತಿ ಕೊಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.