ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಇಲ್ಲಿಗೆ ಸಮೀಪದ ದನಗಳ ದೊಡ್ಡಿ ಗ್ರಾಮದಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿ ವರ್ಗಾವಣೆಯಾದ ಶಿಕ್ಷಕ ಅಂಜನಿ ಕುಮಾರ್ ಅವರಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಒಂದು ತೊಲೆ ಚಿನ್ನದ ಉಂಗುರ ಉಡುಗೊರೆ ನೀಡಿ ಬೀಳ್ಕೊಡುಗೆ ನೀಡಿದ್ದಾರೆ.
ಅಂಜಲಿ ಅವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದವರು. ಇಲ್ಲಿಂದ ತವರು ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಶುಕ್ರವಾರ ತಡರಾತ್ರಿಯವರೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಚಿನ್ನ, ಏರ್ ಕೂಲರ್, ರೆಫ್ರಿಜರೇಟರ್ ಮತ್ತು ಸಣ್ಣಪುಟ್ಟ ಬೆಳ್ಳಿಯ ಉಡುಗೊರೆಗಳನ್ನು ನೀಡಿದರು.
ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತೋರಿದ ಅಪಾರ ಪ್ರೀತಿಗೆ ಅಂಜನಿ ಭಾವುಕರಾದರು. ವರ್ಗಾವಣೆಯಾದ ಇದೇ ಶಾಲೆಯ ಇನ್ನೊಬ್ಬ ಶಿಕ್ಷಕ ಸಮೀರ್ ಜೋಶಿ ಅವರಿಗೂ ಕೂಡ ಉಡುಗೊರೆಗಳನ್ನು ಗ್ರಾಮಸ್ಥರು ನೀಡಿದರು.
ಶಿಕ್ಷಣ ಸಂಯೋಜಕ ಲಷ್ಕರ್ ನಾಯ್ಕ, ಸದಾನಂದ, ಪಂಪಾಪತಿ, ಗ್ರಾಮದ ಹಿರಿಯರಾದ ಹನುಮಂತಪ್ಪ ಕೋರಿ, ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಹುಸೇನ್ ಭಾಷಾ, ಮಲ್ಲಪ್ಪ ಕುಷ್ಟಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.