ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನಗಡ್ಡೆಯಲ್ಲಿ ತಲಾ ಒಂದೂವರೆ ದಿನ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ರಾಯರ ಮಠ ಹಾಗೂ ಉತ್ತರಾದಿ ಮಠಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ.
ಡಿ. 10 ಹಾಗೂ 11ರ ಮಧ್ಯಾಹ್ನದ ತನಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರಿಂದ ಆರಾಧನೆ ಅಂಗವಾಗಿ ಪೂಜೆ ನಡೆಯಲಿದೆ. ಮಧ್ಯಾಹ್ನದ ಬಳಿಕದಿಂದ ಡಿ. 12ರ ರವರೆಗೆ ಉತ್ತರಾದಿ ಮಠದವರಿಗೆ ಆರಾದನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಪದ್ಮನಾಭ ತೀರ್ಥರ ಪೂಜೆಗಾಗಿ ರಾಯರ ಮಠ ಹಾಗೂ ಉತ್ತರಾದಿ ಮಠದವರ ನಡುವೆ ಭಿನ್ನಮತವಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು ಆರಾಧನೆ ಇರುವ ಕಾರಣ ಮಧ್ಯಂತರ ತೀರ್ಪು ನೀಡಿದೆ.
‘ಮೊದಲ ಒಂದೂವರೆ ದಿನ ಆರಾಧನೆ ನಡೆಸಲು ನಮಗೆ ಅವಕಾಶ ಲಭಿಸಿದೆ. ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಂಡಿದ್ದೇವೆ. ಆರಾಧನಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ರಾಯರ ಮಠದ ಪ್ರಮುಖರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.