ADVERTISEMENT

ತಾಳಕೇರಿ: ಸೇವಾ ಗುರುಬಳಗದಿಂದ ಗೋಡೆ ಬರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:33 IST
Last Updated 25 ಜುಲೈ 2024, 12:33 IST
ಯಲಬುರ್ಗಾ ತಾಲ್ಲೂಕು ತಾಳಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವಬಂಧು ಸೇವಾ ಗುರುಬಳಗದ ವತಿಯಿಂದ ಗೋಡೆ ಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಯಲಬುರ್ಗಾ ತಾಲ್ಲೂಕು ತಾಳಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವಬಂಧು ಸೇವಾ ಗುರುಬಳಗದ ವತಿಯಿಂದ ಗೋಡೆ ಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಯಲಬುರ್ಗಾ: ತಾಲ್ಲೂಕಿನ ತಾಳಕೇರಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಬಳಗದ ವತಿಯಿಂದ ಗೋಡೆಬರಹ ಹಾಗೂ ವಿವಿಧ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಕುರಿತ ಬರಹಗಳನ್ನು ಬರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳ ಕಲಿಕೆಗೆ ಪೂರಕವಾಗಿರುವ ವಿವಿಧ ವಿಷಯಗಳ ಚಿತ್ರಗಳು, ಕಾರ್ಟೂನ್‍ಗಳು, ನಕ್ಷೆಗಳು, ಸ್ಫೂರ್ತಿದಾಯಕ ನುಡಿಗಳು ಸೇರಿದಂತೆ ವಿವಿಧ ಚಿತ್ರಗಳನ್ನು ಉಚಿತವಾಗಿ ಬಿಡಿಸುವ ಮೂಲಕ ಶಾಲಾ ಕೊಠಡಿಗಳನ್ನು ಅಲಂಕರಿಸಲಾಯಿತು. ಜೊತೆಗೆ ಮಕ್ಕಳ ಕಲಿಕೆಗೆ ಪ್ರೇರಣೆ ನೀಡುವಂತೆ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಶೆಟ್ಟರ್ ಮಾತನಾಡಿ, ‘ಗೋಡೆ ಬರಹದ ಚಿತ್ರಗಳು ವಿದ್ಯಾರ್ಥಿಗಳ ಜ್ಞಾನ ಸಂಪಾದನೆಗೆ ಸಹಕಾರಿ. ಸಮಾನ ಮನಸ್ಕರ ಈ ಕೆಲಸ ಮಾದರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು. ಉಪಾಧ್ಯಕ್ಷ ಮಾರುತಿ ನೀರಲೂಟಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರಾದ ಬಸವರಾಜ ಭಂಗಿ, ಭೀಮಣ್ಣ ಟಣಕನಕಲ್, ಮುತ್ತಣ್ಣ, ವಿಶಾಲಾಕ್ಷಿ ಶ್ಲಾಘಿಸಿದರು.

ADVERTISEMENT

ಸೇವಾ ಗುರುಬಳಗದ ಮುಖ್ಯಸ್ಥ ಸಿದ್ಧಲಿಂಗಪ್ಪ ಶ್ಯಾಗೋಟಿ ಮಾತನಾಡಿ, ‘ಬಿಡುವಿನ ವೇಳೆಯಲ್ಲಿ ಗೋಡೆಬರಹ ಹಮ್ಮಿಕೊಳ್ಳುವ ಕಲಾ ಶಿಕ್ಷಕರು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಾಣದ ಉದ್ದೇಶ ಹೊಂದಿದ್ದಾರೆ. ಚಿತ್ರಗಳು ಮಕ್ಕಳ ಗಮನ ಸೆಳೆಯುವುದರಿಂದ ಸಹಜವಾಗಿ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಈ ಕಾರ್ಯಚಟುವಟಿಕೆ ಜಿಲ್ಲೆಯಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.

ಬಳಗದಲ್ಲಿ ಪ್ರಭು ಶಿವನಗೌಡ್ರ, ಸಂಗಯ್ಯ ಹಿರೇಮಠ, ಮಹಾವೀರ ಕಲ್ಲಭಾವಿ, ಮುರ್ತುಜಾಸಾಬ ಮುಜಾವರ, ಹುಸೇನಸಾಬ ಬಾಗವಾನ್, ಕೊಟ್ರೇಶ ಪಟ್ಟಣ, ಶರಣು ವಾಳದ, ರಾಯಣ್ಣವರ, ವೆಂಕಟೇಶ ಚಾಗಿ, ಆಂಜನೇಯ ಈಳಿಗೇರ, ಧರ್ಮಣ್ಣ ಬಿಂಗಿ, ಮರದಾನಸಾಬ ನಧಾಪ, ಮಂಜುನಾಥ ಕೊಡಕೇರಿ, ಪರಮೇಶ ಚಿಂತಾಮಣಿ, ಸಿದ್ದಯ್ಯ ಮಠದ, ಹನಮೇಶ ಬೆಲ್ಲದ, ನಾಗರಾಜ ಶೆಟ್ಟರ್, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಶಾಲೆಯ ಶಿಕ್ಷಕರಾದ ಹನಮೇಶ, ರಾಮಪ್ಪ, ರೇವಪ್ಪ, ಶೇಖರಪ್ಪ, ರೇಖಾ, ಶರಣಪ್ಪ ಏಳುಗುಡ್ಡದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.