ADVERTISEMENT

ಮಕ್ಕಳ ಆರೋಗ್ಯದ ಕಾಳಜಿ ವಹಿಸಿ: ಜಿಲ್ಲಾ ಸರ್ಜನ್ ಈಶ್ವರ್ ಸವಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 11:52 IST
Last Updated 7 ಜನವರಿ 2022, 11:52 IST
ಗಂಗಾವತಿ ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು
ಗಂಗಾವತಿ ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು   

ಗಂಗಾವತಿ: ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದ ಕುರಿತೂ ಕಾಳಜಿ ಹೊಂದಿರಬೇಕು. ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ, ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಜಿಲ್ಲಾ ಸರ್ಜನ್ ಈಶ್ವರ್ ಸವಡಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ಈಚೆಗೆ 'ಕ್ಷಯಮುಕ್ತ ಗಾಳಿ' ಅಭಿಯಾನದಡಿ ಕ್ಷಯರೋಗದ ಕುರಿತು ತಾಲ್ಲೂಕಿನ ಪ್ರೌಢಶಾಲೆಯ ಶಿಕ್ಷಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.

ಕ್ಷಯರೋಗ ತೀವ್ರತೆ, ಅದರಿಂದ ದೇಶಕ್ಕೆ ಆಗುವ ನಷ್ಟ, ಸಮಾಜದಲ್ಲಿನ ಕ್ಷಯರೋಗಿಗಳ ತಾರತಮ್ಯ, ಶಾಲಾ ವಿದ್ಯಾರ್ಥಿಗಳು ಕ್ಷಯರೋಗಿಗಳನ್ನು ಗುರುತಿಸುವ ಬಗೆ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.

ADVERTISEMENT

ಗಂಗಾವತಿ ಮಕ್ಕಳ ತಜ್ಞ ಡಾ.ಅಮರೇಶ ಮಾತನಾಡಿ,‌ ಮಕ್ಕಳಲ್ಲಿ ಎರಡು ವಾರಕ್ಕೂ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ತೂಕ‌ ಕಡಿಮೆ, ಕಫದಲ್ಲಿ ರಕ್ತ, ಹಸಿವು ಇಲ್ಲದಿರುವುದು, ಎದೆ ನೋವು, ಕತ್ತುಗಳಲ್ಲಿ ಗಡ್ಡೆ ಆಗಿರುವ ಲಕ್ಷಣಗಳು ಗೋಚರಿಸಿದಾಗ ಕೂಡಲೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸುವಂತೆ ಪಾಲಕರಿಗೆ ತಿಳಿಸಬೇಕು ಎಂದು ಹೇಳಿದರು.

ಮಲ್ಲಿಕಾರ್ಜುನ, ನಾಗರಾಜ್, ರವಿ, ಕಾಶಿಂ ಬೀ, ಹನುಮಂತಪ್ಪ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.