ADVERTISEMENT

ಹನುಮಸಾಗರ: ಅನ್ನದಾನೇಶ್ವರ ಶಾಖಾಮಠದ ಜಾಗವೂ ವಕ್ಫ್‌ ಆಸ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:29 IST
Last Updated 22 ನವೆಂಬರ್ 2024, 4:29 IST

ಹನುಮಸಾಗರ (ಕೊಪ್ಪಳ ಜಿಲ್ಲೆ): 150 ವರ್ಷಗಳ ಇತಿಹಾಸ ಹೊಂದಿರುವ ಗದಗ ಜಿಲ್ಲೆಯ ನರೇಗಲ್‌ನ ಅನ್ನದಾನೇಶ್ವರ ಮಠದ ಶಾಖಾ ಮಠ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿದ್ದು, ಮಠದ ಒಂದಷ್ಟು ಜಾಗ ವಕ್ಫ್‌ ಆಸ್ತಿ ಎಂದು ನಮೂದಾಗಿದೆ.

‘ನಮ್ಮ ಶಾಖಾ ಮಠವು ಸರ್ವೆ ಸಂಖ್ಯೆ 17ರಲ್ಲಿ ಒಟ್ಟು 6 ಎಕರೆ 37 ಗುಂಟೆ ಭೂಮಿ ಹೊಂದಿದೆ. ಇದರಲ್ಲಿ 35 ಗುಂಟೆ ಜಾಗ ವಕ್ಫ್‌ ಆಸ್ತಿ ಎಂದಿದೆ. ಹಿಂದಿನಿಂದಲೂ ಮಠಕ್ಕೆ ಸೇರಿದ ಭೂಮಿಯಾಗಿದ್ದರೂ ಪ್ರಸ್ತುತ ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿದ್ದು ಅಚ್ಚರಿ ಮೂಡಿಸಿದೆ’ ಎಂದು ಮಠದ ಪ್ರಮುಖರಾದ ಮಲ್ಲಯ್ಯ ಕೋಮಾರಿ, ಸಂಗಯ್ಯ ವಸ್ತ್ರದ, ಬಸವರಾಜ ಹಳ್ಳೂರು ತಿಳಿಸಿದರು.

‘ಮೊದಲು ಮಠದ ಹೆಸರಿನಲ್ಲಿದ್ದ 35 ಗುಂಟೆ ಭೂಮಿಯನ್ನು ಮರಳಿ ಮಠದ ಹೆಸರಿಗೆ ವರ್ಗಾಯಿಸಿಕೊಡಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.