ADVERTISEMENT

ತುಂಗಭದ್ರಾ ಜಲಾಶಯ | ಮುರಿದ 19ನೇ ಗೇಟ್‌–ಬೆಂಗಳೂರಿನಿಂದ ಬರಲಿದೆ ತಜ್ಞರ ತಂಡ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 22:10 IST
Last Updated 10 ಆಗಸ್ಟ್ 2024, 22:10 IST
   

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್‌ ಸಂಖ್ಯೆ 19ರಲ್ಲಿ ಚೈನ್‌ ಲಿಂಕ್‌ ತುಂಡಾಗಿರುವ ಕಾರಣ ಅದನ್ನು ಸರಿಪಡಿಸಲು ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ತಜ್ಞರ ತಂಡ ಬರಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಎಲ್‌. ಬಸವರಾಜ್‌ ತಿಳಿಸಿದ್ದಾರೆ.

ಜಲಾಶಯಕ್ಕೆ ಭೇಟಿ ನೀಡಿದ ಅವರು ‘19ನೇ ಕ್ರಸ್ಟ್‌ಗೇಟ್‌ನಲ್ಲಿ ಲಿಂಕ್ ಚೈನ್‌ ತುಂಡಾಗಿದ್ದು, ನೀರಿನ ಹರಿವು ಒಂದೇ ಕಡೆ ಹೆಚ್ಚಾಗಿ ಆ ಗೇಟ್‌ ಮೇಲೆ ಒತ್ತಡವಾಗುವುದನ್ನು ತಪ್ಪಿಸಲು ಉಳಿದ ಗೇಟ್‌ಗಳಿಂದಲೂ ನೀರು ಹರಿಸಲಾಗುತ್ತಿದೆ. ಬೆಂಗಳೂರಿನಿಂದ ತಜ್ಞರ ತಂಡ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಜಿಸಲಾಗುವುದು’ ಎಂದರು.

‘ಪ್ರತಿವರ್ಷವೂ ಜಲಾಶಯದ ಗೇಟ್‌ಗಳ ನಿರ್ವಹಣೆ ಮಾಡಲಾಗುತ್ತದೆ. ಜಲಾಶಯದ ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ. ಆತಂಕಗೊಳ್ಳುವ ಅಗತ್ಯವೂ ಇಲ್ಲ. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಈಗಿನ ನೀರಿನಲ್ಲಿ ಆಗಿರುವ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆಯೊ ಇಲ್ಲವೊ ಎನ್ನುವುದನ್ನು ತಜ್ಞರ ತಂಡ ನಿರ್ಧಾರ ಮಾಡಲಿದೆ. ಸದ್ಯ 70 ಸಾವಿರ ಕ್ಯುಸೆಕ್‌ ನೀರು ಹೊರಗಡೆ ಬಿಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.