ಕಾರಟಗಿ: ಕಾರು ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರಿಗೆ ಗಾಯಗಳಾಗಿರುವ ಘಟನೆ ಪಟ್ಟಣದ ಸಿದ್ಧಲಿಂಗನಗರ ಸಮೀಪದ ಪದ್ಮಾವತಿ ರೈಸ್ಮಿಲ್ ಹತ್ತಿರದ ತಿರುವು ಬಳಿ ಭಾನುವಾರ ತಡರಾತ್ರಿ ಜರುಗಿದೆ.
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಪೊಲೀಸ್ ಕಾನ್ಸ್ಟೆಬಲ್ ಶಿವುಕಾಂತ (29) ಮತ್ತು ಕಕ್ಕರಗೋಳ ನಿವಾಸಿ ಕಾರು ಚಾಲಕ ಹುಲಿಗೆಪ್ಪ (29) ಮೃತರು. ಕಾರಿನಲ್ಲಿದ್ದ ವೀರೇಶ, ಸಂತೋಷ, ಸಯ್ಯದ ಅಬ್ಬು ಹಾಗೂ ಲಾರಿ ಚಾಲಕ ಚೇತನ ಗಾಯಗೊಂಡಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.