ಕುಷ್ಟಗಿ (ಕೊಪ್ಪಳ ಜಿಲ್ಲೆ): ಬಾಗಲಕೋಟೆ ಜಿಲ್ಲೆ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಎರಡನೇ ಮದುವೆಯಾಗಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದ ಚಿತ್ರ ಮತ್ತು ಇನ್ನಿತರ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ, ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ವಿಜಯಾನಂದ ಕಾಶಪ್ಪನವರ ನಿರಾಕರಿಸಿದರು.
ಶನಿವಾರ ಪಟ್ಟಣಕ್ಕೆ ಬಂದಿದ್ದ ವಿಜಯಾನಂದ ಕಾಶಪ್ಪನವರ ಅವರಿಗೆ ಎರಡನೇ ಮದುವೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಎರಡನೇ ಮದುವೆಯಾದ ಬಗ್ಗೆ ದಾಖಲೆ ಇದ್ದರೆ ತೋರಿಸಿ. ನಂತರ ಮಾತನಾಡುವೆ. ಈ ವಿಷಯದ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದರು..
ವೈರಲ್ ಆಗಿರುವ ಚಿತ್ರಗಳಲ್ಲಿ ಹೆಣ್ಣು ಮಗುವಿನ ಜನನ ಪ್ರಮಾಣಪತ್ರವೂ ಸೇರಿದೆ. ಆ ಪ್ರಮಾಣಪತ್ರದಲ್ಲಿ ಹೆಣ್ಣು ಮಗುವಿನ ತಂದೆಯ ಹೆಸರಿನ ಮುಂದೆ ವಿಜಯಾನಂದ ಕಾಶಪ್ಪನವರ ಹೆಸರಿದೆ.
ಪ್ರಮಾಣಪತ್ರದ ಪ್ರಕಾರ, 2021ರ ಸೆಪ್ಟೆಂಬರ್ 1ರಂದು ಬೆಂಗಳೂರಿನ ಬಿಬಿಎಂಪಿ ಮದರ್‌ಹುಡ್ ಆಸ್ಪತ್ರೆಯಲ್ಲಿ ಹೆಣ್ಣುಮಗುವಿನ ಜನನವಾಗಿದೆ. ತಂದೆ ತಾಯಿಯ ಕಾಯಂ ವಿಳಾಸ ಕಾಲಂನಲ್ಲಿ 'ಪ್ರೆಸ್ಸೀಜ್ ಮಿಸ್ಟಿ ವಾಟರ್ ಅಪಾರ್ಟ್ ಮೆಂಟ್, ಕೆಂಪಾಪುರ ಮುಖ್ಯರಸ್ತೆ, ಹೆಬ್ಬಾಳ ಬೆಂಗಳೂರು ಉತ್ತರ' ಎಂದಿದೆ.
‘ಪ್ರಮಾಣಪತ್ರ ಸೇರಿ ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ವೈಯಕ್ತಿಕ ಬದುಕು ಮತ್ತು ರಾಜಕೀಯ ಬೇರೆ ಬೇರೆ. ಅದನ್ನು ಯಾರೂ ಕೆದಕಬಾರದು. ಚುನಾವಣಾ ಸಂದರ್ಭದಲ್ಲಿ ನಮ್ಮ ವಿರೋಧಿಗಳು ಈ ರೀತಿ ಮಾಡುತ್ತ ಇರುತ್ತಾರೆ’ ಎಂದು ವಿಜಯಾನಂದ ಕಾಶಪ್ಪನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.