ಹನುಮಸಾಗರ: ‘ಹಿಂದೂ ಧರ್ಮದಲ್ಲಿ ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್ ಎನ್ನುವ ನಂಬಿಕಯಿದೆ. ಹಿಂದೂ ಧರ್ಮದಲ್ಲಿ, ವಿಶ್ವಕರ್ಮ ದೇವರನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ಅವನನ್ನು ಯಂತ್ರಗಳ ದೇವರು ಎಂದು ಕರೆಯಲಾಗುತ್ತದೆ’ ಎಂದು ರಂಗ ಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.
ಇಲ್ಲಿನ ವಿಶ್ವಚೇತನ ಶಿಕ್ಷಣ ಸಂಸ್ಥೆಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಎಂದರೆ ಎಲ್ಲವನ್ನೂ ಸಾಧಿಸುವವನು ಎಂದರ್ಥ. ವಿಶ್ವಕರ್ಮ ವಾಸ್ತುಶಿಲ್ಪಿಗಳ, ಕುಶಲಕರ್ಮಿಗಳ ಪ್ರಧಾನ ದೇವತೆಯಾಗಿದ್ದಾನೆ. ಇತನೇ ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವೀರೇಶ ವಿಶ್ವಕರ್ಮ ಮಾತನಾಡಿ,‘ವಿಶ್ವಕರ್ಮ ಈ ಗೋಚರವಾದ ವಿಶ್ವದ ವಿಕಸನಕ್ಕಾಗಿ ತನ್ನನು ಬಲಿಕೊಟ್ಟವನು. ಇಂಥ ಆದರ್ಶ ಪುರುಷರನ್ನು ನಾವು ಸದಾ ನೆನೆಯಬೇಕು. ನಾವೆಲ್ಲರೂ ದೇಶಭಕ್ತಿಯುಳ್ಳ ಸಮಾಜವನ್ನು ನಿರ್ಮಿಸಬೇಕು. ದುಷ್ಟ ಶಕ್ತಿ ನಿಗ್ರಹಿಸಬೇಕು. ಯುವಜನರು ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಿಸಲು ಮುಂದೆ ಬರಬೇಕು’ ಎಂದರು.
ಪ್ರಮುಖರಾದ ವಿಶ್ವನಾಥ ಕನ್ನೂರ, ಶ್ರೀನಿವಾಸ ಜಹಗೀರದಾರ ಹಾಗೂ ಸುನೀಲ ಬಸುದೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.