ಕನಕಗಿರಿ: ಗಾಳಿಪಟವು ಹೇಗೆ ಸ್ವತಂತ್ರವಾಗಿ ಹಾರಾಡುತ್ತದೆಯೊ ಹಾಗೆ ಅದೇ ರೀತಿಯಲ್ಲಿ ಮತದಾರರು ಸಹ ಸ್ವತಂತ್ರವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ, ಗಾಳಿಪಟವನ್ನು ಹಾರಿಸಿ ಅವರು ಮಾತನಾಡಿದರು.
ವಿಶೇಷ ರೀತಿಯಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಎಲ್ಲಾ ಮತದಾರರು ಮೇ. 7 ರಂದು ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕೆಂದು ತಿಳಿಸಿದರು. ಎಷ್ಟೇ ಕಷ್ಟ ಬಂದರೂ
ಮತದಾನದಿಂದ ದೂರ ಉಳಿಯಬಾರದು ಎಂದರು.
ಮೇ 7 ರಂದು ತಪ್ಪದೇ ಮತ ಚಲಾಯಿಸಬೇಕು. ನಮ್ಮ ಮತ ನಮ್ಮ ಹಕ್ಕು ಸೇರಿದಂತೆ ಇತರೆ ಘೋಷಣೆಗಳನ್ನು ಗಾಳಿಪಟದಲ್ಲಿ ಬರೆಸಿ ಗಮನ ಸೆಳೆಯಲಾಯಿತು.
ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ, ಮೇಲ್ವಿಚಾರಕಿ ಶಾಹೀದಬೇಗ್ಂ, ಕಂದಾಯ ಇಲಾಖೆಯ ಉಮಾಮಹೇಶ್, ಉಮೇಶ್, ತಾಲ್ಲೂಕು ಪಂಚಾಯಿತಿಯ ಹನುಮಂತ, ಕೊಟ್ರಯ್ಯಸ್ವಾಮಿ, ಪವನಕುಮಾರ್, ಯಂಕೋಬ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.