ಗಂಗಾವತಿ: ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಫೋಟೋಗ್ರಾಫಿಕ್ ಅಸೋಶಿಯೇಷನ್ ಆಫ್ ಕೂಚ್‌ಬೆಹರ್ ಆಯೋಜಿಸಿದ್ದ ಎಕ್ಸ್‌ಪೋಶರ್-2022 ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.
ಸ್ಪರ್ಧೆಯಲ್ಲಿ ಒಟ್ಟು 4 ವಿಭಾಗಗಳಿದ್ದು, ಟ್ರಾವೆಲ್ ವಿಭಾಗದ ‘ವಾರಿ ಫೇಸ್ಟಿವಲ್’ ಎಂಬ ಶೀರ್ಷಿಕೆಗೆ ಚಿನ್ನದ ಪದಕ ದೊರೆತಿದೆ. 26 ದೇಶಗಳಿಂದ 125 ಸ್ಪರ್ಧಿಗಳು ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಛಾಯಾ ಚಿತ್ರಗಾರ ವಿಕ್ಕುಮ್ ಸೇನಾ ನಾಯಕೇ (ಶ್ರೀಲಂಕಾ), ಅಹಮ್ಮದ್ ಮೋಹಮ್ಮದ್ ಹಸನ್(ಈಜಿಪ್ಟ್), ಬಿ.ಕೆ.ಎನ್.ಸಿನ್ಹಾ (ಭಾರತ) ಅವರು ತೀರ್ಪುಗಾರರಾಗಿದ್ದರು.
ಶ್ರೀನಿವಾಣ ಎಣ್ಣಿ ಪ್ರಸ್ತುತ
ಗಂಗಾವತಿ ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರ ರಾಗಿ ಕೆಲಸ ಮಾಡುತ್ತಿದ್ದು, ಕಳೆದ 6 ವರ್ಷಗಳಿಂಗ ಹವ್ಯಾಸಿ ಛಾಯಾಗ್ರಾಹ ಕರಾಗಿ ತೆಗೆದ ಛಾಯಾಚಿತ್ರಗಳು 30ಕ್ಕೂ ಹೆಚ್ಚು ದೇಶಗಳಲ್ಲಿ
ಪ್ರದರ್ಶನಗೊಂಡಿವೆ.
ಇವರಿಗೆ ಚಿನ್ನದ ಪದಕ ಸೇರಿ ಈವರೆಗೆ 100ಕ್ಕೂ ಹೆಚ್ಚು ಬೆಳ್ಳಿ, ಕಂಚಿನ ಪದಕಗಳು ಹುಡಿಕೊಂಡು ಬಂದಿವೆ. ಇವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆ, ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.