ADVERTISEMENT

ಗಂಗಾವತಿ: ಪ್ರಾಣಿ-ಪಕ್ಷಿ ಸಂಕುಲಕ್ಕೆ ನೀರು, ಆಹಾರದ ವ್ಯವಸ್ಥೆ

ಕಿಷ್ಕಿಂಧ ಚಾರಣ ಬಳಗ, ಕ್ಲೀನ್ ಅಂಡ್ ಗ್ರೀನ್ ಪೋರ್ಸ್ ತಂಡದ ಚಾರಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:55 IST
Last Updated 7 ಏಪ್ರಿಲ್ 2024, 15:55 IST
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮ ಸಮೀಪದ ಕುಂಟೋಜಿ ಕಾಯ್ದಿಟ್ಟ ಅರಣ್ಯ (ಡಗ್ಗಿ) ಪ್ರದೇಶ ಭಾಗದಲ್ಲಿನ ಪ್ರಾಣಿ-ಪಕ್ಷಿ ಸಂಕುಲಕ್ಕೆ ಭಾನುವಾರ ಕಿಷ್ಕಿಂಧ ಯುವ ಚಾರಣ ಬಳಗ, ಕ್ಲೀನ್ ಅಂಡ್ ಗ್ರೀನ್ ತಂಡದ ಸದಸ್ಯರು ಕುಡಿಯುವ ನೀರು ಸೇರಿ ಆಹಾರದ ವ್ಯವಸ್ಥೆ ಮಾಡಿದರು
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮ ಸಮೀಪದ ಕುಂಟೋಜಿ ಕಾಯ್ದಿಟ್ಟ ಅರಣ್ಯ (ಡಗ್ಗಿ) ಪ್ರದೇಶ ಭಾಗದಲ್ಲಿನ ಪ್ರಾಣಿ-ಪಕ್ಷಿ ಸಂಕುಲಕ್ಕೆ ಭಾನುವಾರ ಕಿಷ್ಕಿಂಧ ಯುವ ಚಾರಣ ಬಳಗ, ಕ್ಲೀನ್ ಅಂಡ್ ಗ್ರೀನ್ ತಂಡದ ಸದಸ್ಯರು ಕುಡಿಯುವ ನೀರು ಸೇರಿ ಆಹಾರದ ವ್ಯವಸ್ಥೆ ಮಾಡಿದರು   

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಗ್ರಾಮ ಸಮೀಪದ ಕುಂಟೋಜಿ ಕಾಯ್ದಿಟ್ಟ ಅರಣ್ಯ (ಡಗ್ಗಿ) ಪ್ರದೇಶ ಭಾಗದಲ್ಲಿನ ಪ್ರಾಣಿ-ಪಕ್ಷಿ ಸಂಕುಲಕ್ಕೆ ಭಾನುವಾರ ಕಿಷ್ಕಿಂಧ ಯುವ ಚಾರಣ ಬಳಗ, ಕ್ಲೀನ್ ಅಂಡ್ ಗ್ರೀನ್ ತಂಡದ ಸದಸ್ಯರು ಕುಡಿಯುವ ನೀರು ಸೇರಿ ಆಹಾರದ ವ್ಯವಸ್ಥೆ ಮಾಡಿದರು.

ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಮುಖ್ಯಸ್ಥ ಮೊಮ್ಮದ್ ರಫಿ ಮಾತನಾಡಿ,‘ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಶೇ‌42ರಷ್ಟಿದ್ದು, ಜನರು ಬಿಸಿಲಿನ ಪ್ರಖರಕ್ಕೆ ತಬ್ಬಿಬ್ಬಾಗುತ್ತಿದ್ದಾರೆ. ಇಂತಹ ವೇಳೆಯಲ್ಲಿ ಪರಿಸರ ಮತ್ತು ಪ್ರಾಣಿ- ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅರಣ್ಯ ಪ್ರದೇಶದಲ್ಲಿ ತೊಟ್ಟಿಗಳು ನಿರ್ಮಿಸಿ ಕುಡಿಯಲು ನೀರು, ಆಹಾರ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಕಿಷ್ಕಿಂಧ ಯುವ ಚಾರಣ ಬಳಗದ ಸದಸ್ಯ ನಿರುಪಾದಿ ಭೋವಿ, ಪರಿಸರ ಪ್ರೇಮಿ ಬಾಲಕಿ ಸಿಂಧು ಮಾತನಾಡಿದರು.

ADVERTISEMENT

ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಕ್ಲೀನ್ ಅಂಡ್ ಗ್ರೀ ನ್ ಫೋರ್ಸ್ ತಂಡದ ಸದಸ್ಯರಾದ ಸೌಮ್ಯಶ್ರೀ, ಸತೀಶ, ರವಿ ನಾಯಕ, ಹನುಮೇಶ ಡಣಾಪುರ, ಸುಮಂಗಲ, ಶಿವಕುಮಾರ, ಸೋಮು ಕುದುರಿಹಾಳ, ಮಂಜುಳಾ ಶೆಟ್ಟಿ, ಮುತ್ತು ಬಂಗಿ, ಮದ್ದಾನಪ್ಪ, ಸಂತೋಷ ಕುಂಬಾರ, ಚನ್ನಬಸವ ಬಳ್ಳೊಳ್ಳಿ, ಪಂಪಾಪತಿ ಮುದುಗಲ, ಪ್ರಕಾಶ, ರಮೇಶ ಹರನಾಯಕ, ಮಂಜುನಾಥ ಇಂಡಿ, ಚಾರ್ವಿ, ಅರ್ಜುನ ಜಿ.ಆರ್ ಸೇರಿ ಮಕ್ಳಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.