ಯಲಬುರ್ಗಾ: ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಒಂದನೇ ವಾರ್ಡ್‌ನಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ನಂತರ ನಡೆದ ಮೆರವಣಿಗೆಯಲ್ಲಿ ಸ್ಥಳೀಯ ಗಣ್ಯರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯ ಅಂದಯ್ಯ ಕಳ್ಳಿಮಠ ಮಾತನಾಡಿ, ಸುಮಾರು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಹಾಗೂ ವರ್ಷಕ್ಕೊಮ್ಮೆ ಜಾತ್ರೆ ನೆರವೇರುತ್ತಿರುವುದು ಸಂತಸದ ಸಂಗತಿಯಾಗಿದೆ. ದೇವಸ್ಥಾನವು ಕೂಡ ಅಭಿವೃದ್ಧಿಗೊಂಡಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಲಾವತಿ, ವಸಂತ ಭಾವಿಮನಿ, ಹನಮಂತಪ್ಪ ಭಜಂತ್ರಿ ಮಾತನಾಡಿದರು.
ಸದಸ್ಯ ರಿಯಾಜ್ ಖಾಜಿ, ಮುಖಂಡ ಮಲ್ಲಪ್ಪ ಸೂರಕೊಡ, ಚಂದ್ರು ಮರದಡ್ಡಿ, ಈರಪ್ಪ ಬಣಕಾರ, ರಮೇಶ ಬೇಲೇರಿ, ಗವಿಸಿದ್ದಯ್ಯ ಗವಿಮಠ, ಕಳಕಯ್ಯ ಶಿವಪ್ಪಯ್ಯನಮಠ, ಪಾಷಾಸಾಬ ಕನಕಗಿರಿ, ಕಲ್ಲಪ್ಪ ಕರಮುಡಿ, ರಮೇಶ ಮುಧೋಳ, ಪುಟ್ಟಪ್ಪ ಕಮ್ಮಾರ, ಉಮೇಶ ಚಿಂಪರ, ಶಿವಪ್ಪ ಕುರಿ, ಅಮರೇಶ ಸಂಕನೂರು, ಶರಣಪ್ಪ ಕುಂಬಾರ, ಮುತ್ತಪ್ಪ ನರೇಗಲ್ಲ ಮೈಲಾರಿ ವಾಲ್ಮೀಕಿ ಸಂಗಪ್ಪ ಇನಾಮತಿ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.