ADVERTISEMENT

ನಾಗವಲ್ಲಿ ಕಾಲ್ಪನಿಕ ಕಥೆ: ದ್ವಾರಕೀಶ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 9:30 IST
Last Updated 2 ಜೂನ್ 2011, 9:30 IST

ಮದ್ದೂರು: ನಾಗವಲ್ಲಿ ಕಥೆ ಕೇವಲ ಕಾಲ್ಪನಿಕ ಕಥೆಯಾಗಿದ್ದು, ನಾಗವಲ್ಲಿ ಉಪಟಳದಿಂದ ಸೌಂದರ್ಯ, ವಿಷ್ಣುವರ್ಧನ್ ಅವರ ಸಾವು ಸಂಭವಿಸಿತು ಎನ್ನುವುದು ಕೇವಲ ಮಾಧ್ಯಮಗಳ ಕಟ್ಟು ಕಥೆ ಎಂದು ಹಿರಿಯ ಚಿತ್ರ ನಿರ್ದೇಶಕ ಹಾಗೂ ನಟ ದ್ವಾರಕೀಶ್ ಬುಧವಾರ ತಿಳಿಸಿದರು.

ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಡನೆ ಮಾತನಾಡಿದರು. ನಾಗವಲ್ಲಿ ಕಥೆಯನ್ನು ಮೊದಲಿಗೆ ಮಲೆಯಾಳಂನಲ್ಲಿ ಸಿನಿಮಾ ಮಾಡಲಾಯಿತು.
 
ಇದುವರೆಗೆ ಆ ಚಿತ್ರದ ನಿರ್ದೇಶಕರಿಗಾಗಲಿ, ನಟರಿಗಾಗಲಿ ಯಾವುದೇ ಅನಾಹುತವಾಗಿಲ್ಲ.ನಾನು ಕೂಡ ಇದೇ ಕಥೆಯನ್ನು ಚಿತ್ರವಾಗಿಸಿದೆ. ನನಗೂ ನಷ್ಟಕ್ಕಿಂತ ಲಾಭವೇ ಹೆಚ್ಚು ಆಗಿದೆ ಎಂದರು.
ವಿಷ್ಣುವರ್ಧನ ಚಿತ್ರದ ಶೀರ್ಷಿಕೆ ವಿವಾದ ಬಗೆಹರಿದಿದೆ. ರಾಜ ವಿಷ್ಣುವರ್ಧನ ಎಂದು ಶೀರ್ಷಿಕೆ ಇಟ್ಟು ಚಿತ್ರೀಕರಿಸಲಾಗುತ್ತಿದೆ. 

ಕನ್ನಡಿಗರ ಪರಭಾಷಾ ವ್ಯಾಮೋಹ ತ್ಯಜಿಸಿ ಹೆಚ್ಚು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಉದ್ಯಮವನ್ನು ಉಳಿಸಬೇಕು ಎಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.