ADVERTISEMENT

ಅಂಗನವಾಡಿ ಕೇಂದ್ರಕ್ಕೆ ₹4 ಲಕ್ಷ ಮೌಲ್ಯದ ಭೂದಾನ ಮಾಡಿದ ರೈತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 23:29 IST
Last Updated 27 ಜನವರಿ 2024, 23:29 IST
ಕಿಕ್ಕೇರಿ ಹೋಬಳಿಯ ಅಂಕನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಗ್ರಾಮದ ಕುಮಾರ್ (ಬಲದಿಂದ ಎರಡನೆಯವರು) ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತರುಣ್‌ ಕುಮಾರ್‌ಗೆ ಭೂಮಿ ದಾನ ಪತ್ರ ನೀಡಿದರು. ಮುಖಂಡರಾದ ಅರುಣ್‌ಕುಮಾರ್, ಎ.ಎಸ್. ಮಂಜೇಗೌಡ, ಮುಖಂಡರಾದ ಪ್ರವೀಣ, ಎ.ಬಿ. ರವಿ, ಶೇಖರ್ ಭಾಗವಹಿಸಿದ್ದರು

ಕಿಕ್ಕೇರಿ (ಮಂಡ್ಯ): ಕೆ.ಆರ್‌. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಅಂಕನಹಳ್ಳಿಯ ರೈತ ಪಟೇಲ್ ಕೃಷ್ಣೇಗೌಡರ ಪುತ್ರ ಕುಮಾರ್ ಅವರು ಗ್ರಾಮದ ಅಂಗನವಾಡಿಗೆಂದು ₹4 ಲಕ್ಷ ಮೌಲ್ಯದ 30*75 ಅಳತೆಯ ನಿವೇಶನವನ್ನು ದಾನ ಮಾಡಿದ್ದಾರೆ.

‘ನಮ್ಮೂರಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು’ ಎಂದು ಕೋರಿ ಅವರು ಭೂದಾನ ಪತ್ರವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತರುಣ್‌ ಕುಮಾರ್‌ಗೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್‌ಕುಮಾರ್, ಐಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಸ್. ಮಂಜೇಗೌಡ, ಮುಖಂಡರಾದ ಪ್ರವೀಣ, ಎ.ಬಿ. ರವಿ, ಶೇಖರ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.