ADVERTISEMENT

‘ದೇವರ ಆರಾಧನೆಯಿಂದ ನೆಮ್ಮದಿ, ಫಲ ಪ್ರಾಪ್ತಿ’

ಚಿಕ್ಕ ಹೊಸಗಾವಿಯಲ್ಲಿ ಲೋಕಾರ್ಪಣೆಗೊಂಡ ಚಿಕ್ಕ ಸಾಯಿಬಾಬಾ ದೇಗುಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 13:45 IST
Last Updated 14 ನವೆಂಬರ್ 2024, 13:45 IST
<div class="paragraphs"><p>ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಚಿಕ್ಕ ಸಾಯಿಬಾಬಾ, ವಿದ್ಯಾಬುದ್ಧಿ ವಿನಾಯಕ, ದತ್ತಾತ್ರೇಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಹಾಗೂ ದೇಗುಲ ಲೋಕಾರ್ಪಣೆ ಗುರುವಾರ ನಡೆಯಿತು. ನಂಜಾವಧೂತ ಸ್ವಾಮೀಜಿ, ಬ್ರಹ್ಮಾಂಡ ಗುರೂಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ದೇವಸ್ಥಾನದ ಸಂಸ್ಥಾಪಕರಾದ ಬೆಟ್ಟಸ್ವಾಮಿಗೌಡ&nbsp;ಭಾಗವಹಿಸಿದ್ದರು</p></div>

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಚಿಕ್ಕ ಸಾಯಿಬಾಬಾ, ವಿದ್ಯಾಬುದ್ಧಿ ವಿನಾಯಕ, ದತ್ತಾತ್ರೇಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಹಾಗೂ ದೇಗುಲ ಲೋಕಾರ್ಪಣೆ ಗುರುವಾರ ನಡೆಯಿತು. ನಂಜಾವಧೂತ ಸ್ವಾಮೀಜಿ, ಬ್ರಹ್ಮಾಂಡ ಗುರೂಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ದೇವಸ್ಥಾನದ ಸಂಸ್ಥಾಪಕರಾದ ಬೆಟ್ಟಸ್ವಾಮಿಗೌಡ ಭಾಗವಹಿಸಿದ್ದರು

   

ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ಚಿಕ್ಕ ಸಾಯಿಬಾಬಾ, ವಿದ್ಯಾಬುದ್ಧಿ ವಿನಾಯಕ, ದತ್ತಾತ್ರೇಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಹಾಗೂ ದೇಗುಲವು ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ಗುರುವಾರ ಲೋಕಾರ್ಪಣೆಗೊಂಡಿತು.

ದೇಗುಲ ಉದ್ಘಾಟಿಸಿದ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಜನರು ದೇವರನ್ನು ಭಕ್ತಿಯಿಂದ ಆರಾಧಿಸುವುದರಿಂದ ನೆಮ್ಮದಿಯ ಜೊತೆಗೆ ಬೇಡಿದ ಪೂಜಾ ಫಲಗಳು ಲಭಿಸುತ್ತವೆ. ಅಂತೆಯೇ ಆರೋಗ್ಯಕರ ಸಮಾಜದ ನಿರ್ಮಾಣಕ್ಕೂ ನಾಂದಿಯಾಗುತ್ತದೆ’ ಎಂದರು.

ADVERTISEMENT

ಬ್ರಹ್ಮಾoಡ ಗುರೂಜಿ ಮಾತನಾಡಿ, ‘ಕೊಪ್ಪ ಹೋಬಳಿಯ ಒಂದು ಚಿಕ್ಕ ಗ್ರಾಮದಲ್ಲಿ ದೊಡ್ಡ ಭಕ್ತಿಯ ಮನಸ್ಸಿನಿಂದ ಸಾಯಿಬಾಬಾ ಅವರ ದೇಗುಲವನ್ನು ನಿರ್ಮಿಸಿರುವ ಬೆಟ್ಟಸ್ವಾಮಿಗೌಡ ಅವರ ಕೆಲಸ ಶ್ಲಾಘನೀಯ’ ಎಂದರು.

ಅರೇಶಂಕರ ಮಠದ  ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಬೆಂಗಳೂರಿನ ಮಹಿಳಾ ತಂಡದಿಂದ ದೇವರ ಭಜನೆ ನಡೆಯಿತು. ದೇವಸ್ಥಾನದ ಸಂಸ್ಥಾಪಕರಾದ ಗ್ರಾ.ಪಂ. ಸದಸ್ಯ ಹಾಗೂ ಸಮಾಜ ಸೇವಕರಾದ ಬೆಟ್ಟಸ್ವಾಮಿಗೌಡ (ಬಿ.ಎಸ್.ಗೌಡ) ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಪ್ರತಿಷ್ಠಾಪನಾ ಅಂಗವಾಗಿ ಗಣಪತಿ ಪೂಜೆ, ಹೋಮಹವನ ಮಹಾಸಂಕಲ್ಪ, ಪುಣ್ಯಾಹ, ನವಗ್ರಹ ಪೂಜೆ, ಅಷ್ಟೋತ್ತರ ಕಲಶ ಆರಾಧನೆ, ಕಲಶ ಪ್ರತಿಷ್ಠಾಪನೆ, ಮಹಾಭಿಷೇಕ, ಅಗ್ನಿ ಪ್ರತಿಷ್ಠೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಚಿಕ್ಕ ಸಾಯಿಬಾಬಾ ವಿದ್ಯಾಬುದ್ಧಿ ವಿನಾಯಕ ದತ್ತಾತ್ರೇಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಹಾಗೂ ದೇಗುಲ ಲೋಕಾರ್ಪಣೆ ಕಾರ್ಯಕ್ರಮಲದಲ್ಲಿ ನಂಜಾವಧೂತ ಸ್ವಾಮೀಜಿ ಮಾತನಾಡಿದರು. ಬ್ರಹ್ಮಾಂಡ ಗುರೂಜಿ ಸಿದ್ಧರಾಮೇಶ್ವರ ಸ್ವಾಮೀಜಿ ದೇವಸ್ಥಾನದ ಸಂಸ್ಥಾಪಕ ಬೆಟ್ಟಸ್ವಾಮಿಗೌಡ  ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.