ಮದ್ದೂರು: ಮನೆಯ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಬಿದ್ದು ಯೋಧರೊಬ್ಬರು ಮೃತ ಪಟ್ಟ ಘಟನೆ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಕೆಂಪಯ್ಯ ಎಂಬುವರ ಮಗ ಸಂದೀಪ್ ಕುಮಾರ್ (38) ಎಂಬುವರೇ ಸಾವನ್ನಪ್ಪಿದವರು. ಅವರು ಭಾರತೀಯ ಸೇನೆಯಲ್ಲಿ ಹರಿಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.
ಗುರುವಾರ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಮೃತ ಯೋಧರ ಅಂತ್ಯಕ್ರಿಯೆಯು ನಡೆಯಿತು. ತಹಶೀಲ್ದಾರ್ ಸೋಮಶೇಖರ್, ಸಿಪಿಐ ಶಿವಕುಮಾರ್ ಸೇರಿದಂತೆ ಹಲವರು ಈ ವೇಳೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.