ADVERTISEMENT

ಮಂಡ್ಯ | ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ: ಶಾಸಕ ಪಿ.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:24 IST
Last Updated 28 ಜುಲೈ 2024, 13:24 IST
ಮಂಡ್ಯ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಪಿ.ರವಿಕುಮಾರ್‌ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು
ಮಂಡ್ಯ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಪಿ.ರವಿಕುಮಾರ್‌ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಮಂಡ್ಯ: ಶಾಸಕ ಪಿ.ರವಿಕುಮಾರ್‌ ಅವರು ನಗರದ ಗುರುಮಠ, ಹೊಸಹಳ್ಳಿ, ಕಾವೇರಿ ನಗರ, ಗಾಂಧಿ ನಗರ, ಬೋವಿ ಕಾಲೊನಿ, ತಾವರೆಗೆರೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಭಾನುವಾರ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪಿ.ರವಿಕುಮಾರ್‌, ಹೊಸಹಳ್ಳಿ ಬಳಿ ಮೀನುಗಳನ್ನು ರಸ್ತೆ ಬದಿಯಲ್ಲಿಯೇ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇಲ್ಲಿ ಶಾಶ್ವತವಾಗಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು. ಹಾಗಾಗಿ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

₹70 ಲಕ್ಷದಲ್ಲಿ ತಾವರೆಗೆರೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಇಲ್ಲಿನ ಚರಂಡಿ ಸೇರಿದಂತೆ ವಿವಿಧ ಕಾಮಗಾರಿಯ ವ್ಯವಸ್ಥೆ ವೀಕ್ಷಣೆ ಮಾಡಿದ್ದೇನೆ, ಹೊಸಹಳ್ಳಿ ಗುರುಮಠದ ಬಳಿ ಇರುವ ಚರಂಡಿ ಎತ್ತರಕ್ಕೆ ಮನವಿ ಸಲ್ಲಿಸಿದ್ದಾರೆ, ಅದನ್ನು ಮಾಡಲಾಗುವುದು. ಹಲವು ಕಡೆ ಅನಗತ್ಯ ಗೋಡೆಗಳನ್ನು ಮೋರಿ ನೀರು ಸರಾಗವಾಗಿ ಹರಿಯುವ ಕಡೆ ಮಾಡಿಕೊಂಡಿರುವುದನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸೂಚಿಸಿದ್ದೇನೆ ಎಂದರು.

ADVERTISEMENT

ನಗರಸಭೆ ಆಯುಕ್ತ ಆರ್‌.ಮುಂಜುನಾಥ್‌, ಸದಸ್ಯರಾದ ರಾಮಲಿಂಗಯ್ಯ, ಮಂಜುನಾಥ್‌, ಮುಖಂಡರಾದ ಶಿವಲಿಂಗಯ್ಯ, ಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.