ಮಂಡ್ಯ: ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ 'ಸೀರತ್' ಅಭಿಯಾನದ ಕೊನೆಯ ದಿನದಂದು ಪ್ರವಾದಿ ಮುಹಮ್ಮದ್ ಲೇಖನ ಸಂಕಲನ ಪುಸ್ತಕವನ್ನು ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆಗೊಳಿಸಿ, ವಿಚಾರ ವಿನಿಮಯ ನಡೆಸಿದರು.
ದೇಶದಾದ್ಯಂತ ನೂರಾರು ಕಡೆಗಳಲ್ಲಿ ವ್ಯಾಪಿಸಿರುವ ಆದಿ ಚುಂಚನಗಿರಿ ಶಾಖಾ ಮಠಗಳ ಮೂಲ ಮಠದಲ್ಲಿ ಸೀರತ್ ಅಭಿಯಾನದ ಕೊನೆಯ ದಿನದ ಭಾಗವಾಗಿ ಜಮಾಅತೆ ಇಸ್ಲಾಮೀ ಇ ಹಿಂದ್ ಮೈಸೂರು ವಲಯ ಸ್ಥಾನೀಯರಿಂದ ಮಠದ ಸ್ವಾಮೀಜಿಯವರನ್ನು ಸಂದರ್ಶಿಸಿ ಸೀರತ್ ಅಭಿಯಾನ ಪ್ರಯುಕ್ತ ಶಾಂತಿ ಪ್ರಕಾಶನ ಹೊರತಂದಿರುವ 'ಪ್ರವಾದಿ ಮುಹಮ್ಮದ್ ಲೇಖನ ಸಂಕಲನ' ಪುಸ್ತಕವನ್ನು ನೀಡಿ ಮಾಹಿತಿ ನೀಡಲಾಯಿತು.
ತರುವಾಯ ಸ್ವಾಮೀಜಿಯವರು ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು.
ವಿವಿಧ ಪ್ರವಾದಿಗಳ ಬಗ್ಗೆ ವಿಶೇಷವಾಗಿ ಪ್ರವಾದಿ ಮುಹಮ್ಮದ್ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ತಮ್ಮ ಪೀಠದಲ್ಲಿ ಕುಳಿತುಕೊಂಡು ಸಂದರ್ಶಕರ ಸಮ್ಮುಖದಲಿ ವಿಚಾರ ವಿನಿಮಯ ಮಾಡಿಕೊಂಡರು.
ಜಮಾಅತ್ ತಂಡದಲ್ಲಿ ಮೈಸೂರು ವಲಯ ಸಂಚಾಲಕ ಅಬ್ದುಲ್ ಸಲಾಂ ಯು, ಮೈಸೂರು ಸ್ಥಾನೀಯ ಉಪಾಧ್ಯಕ್ಷ ಅಸಾದುಲ್ಲಾ, ಸದಸ್ಯರಾದ ಅಬ್ದುಲ್ ವಾಹಿದ್ ಅಲಿ, ಫಯಾಝ್ ಮಲಿಕ್ ಹಾಗೂ ಪತ್ರಕರ್ತ ಮೋಹನ್ ಮೈಸೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.