ADVERTISEMENT

ಶ್ರಿರಂಗಪಟ್ಟಣ: ನ.24ಕ್ಕೆ ಅಂಬಿ ಸ್ಮರಣಾರ್ಥ ನಾಡ ಕುಸ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 14:08 IST
Last Updated 22 ನವೆಂಬರ್ 2024, 14:08 IST
ಶ್ರಿರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಯದ ಆವರಣದಲ್ಲಿ ರಾಜ್ಯೋತ್ಸವ ಮತ್ತು ನಟ ದಿವಂಗತ ಅಂಬರೀಶ್‌ ಅವರ ಸ್ಮರಣಾರ್ಥ ನ.24ರಂದು ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಸಂಘಟಕರು ಶುಕ್ರವಾರ ಪ್ರಚಾರ ಪತ್ರಗಳನ್ನು ಬಿಡುಗಡೆ ಮಾಡಿದರು
ಶ್ರಿರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಯದ ಆವರಣದಲ್ಲಿ ರಾಜ್ಯೋತ್ಸವ ಮತ್ತು ನಟ ದಿವಂಗತ ಅಂಬರೀಶ್‌ ಅವರ ಸ್ಮರಣಾರ್ಥ ನ.24ರಂದು ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಸಂಘಟಕರು ಶುಕ್ರವಾರ ಪ್ರಚಾರ ಪತ್ರಗಳನ್ನು ಬಿಡುಗಡೆ ಮಾಡಿದರು   

ಶ್ರಿರಂಗಪಟ್ಟಣ: ರಾಜ್ಯೋತ್ಸವ ಮತ್ತು ನಟ ದಿವಂಗತ ಅಂಬರೀಶ್‌ ಅವರ ಸ್ಮರಣಾರ್ಥ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯದ ಆವರಣದಲ್ಲಿ ನ.24ರಂದು ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘಟಕದ ಎಂ.ಬಿ. ಇಂದ್ರಕುಮಾರ್‌ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಕುಸ್ತಿ ಪಂದ್ಯಾವಳಿಯ ಪ್ರಚಾರ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪಂದ್ಯಾವಳಿಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳ 30ಕ್ಕೂ ಹೆಚ್ಚು ಜತೆ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಮಾರ್ಫಿಟ್‌ ಕುಸ್ತಿ ಕೂಡ ನಡೆಯಲಿದೆ. ಮಹಿಳಾ ಕುಸ್ತಿಯನ್ನೂ ಏರ್ಪಡಿಸಲಾಗಿದೆ. ನ.24ರ ಮಧ್ಯಾಹ್ನ 2 ಗಂಟೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಗುರುದೇವ್‌ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಮುರುಗೇಶ್‌ ನಿರಾಣಿ, ರಾಕ್‌ಲೈನ್‌ ವೆಂಕಟೇಶ್‌, ಅಭಿಷೇಕ್‌ ಅಂಬರೀಶ್‌, ಇಂಡುವಾಳು ಸಚ್ಚಿದಾನಂದ, ರವೀಂದ್ರ ಶ್ರೀಕಂಠಯ್ಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುತ್ತದೆ ಎಂದು ಎಚ್‌.ಎಲ್‌. ಭರತೇಶ್‌ ಹೇಳಿದರು.

ADVERTISEMENT

ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್‌.ಬಿ. ಮಹೇಶ್‌, ಕರುನಾಡ ಕಾರ್ಮಿಕರ ವೇದಿಕೆ ಅಧ್ಯಕ್ಷ ಎಸ್‌. ಶಿವರಾಂ, ಚನ್ನನೆಕೆರೆ ನರೇಂದ್ರ, ರಾಮಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.