ಮಂಡ್ಯ: ‘ಮನುಸ್ಮೃತಿ ಪ್ರಕಾರ ಶೂದ್ರರು ಎಂದರೆ ಗುಲಾಮರು, ಸೂಳೆಯರ ಮಕ್ಕಳು. ದೇಶದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲರೂ ಈ ವರ್ಗಕ್ಕೇ ಸೇರುತ್ತಾರೆ’ ಎಂದು ಪ್ರೊ. ಕೆ.ಎಸ್. ಭಗವಾನ್ ಹೇಳಿದರು.
ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಮ್ಮಿಕೊಂಡಿದ್ದ, ‘ಸಾಮಾಜಿಕ ನ್ಯಾಯ ಜಾರಿಗಾಗಿ ಜನಾಗ್ರಹ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿ, ‘ಮನುಸ್ಮೃತಿಯು ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ನಾಲ್ಕು ವರ್ಣಗಳನ್ನು ಗುರುತಿಸಿತ್ತು. ಅದರಲ್ಲಿ ಇವತ್ತು ಬ್ರಾಹ್ಮಣರು ಮತ್ತು ಶೂದ್ರರಷ್ಟೇ ಉಳಿದಿದ್ದಾರೆ. ಯಾರೆಲ್ಲ ಜನಿವಾರ ಹಾಕಿಕೊಳ್ಳುವುದಿಲ್ಲವೋ ಅವರೆಲ್ಲರೂ ಶೂದ್ರರೇ. ಬ್ರಾಹ್ಮಣ ಹೆಂಗಸರು ಜನಿವಾರ ಧರಿಸುವುದಿಲ್ಲ. ಹೀಗಾಗಿ ಅವರೂ ಶೂದ್ರರೇ. ಇದನ್ನು ಹೇಳಲು ಹೋದರೆ ನನ್ನನ್ನು ಕೊಂದೇ ಹಾಕುತ್ತಾರೆ’ ಎಂದರು.
‘ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ. ಅದರಂತೆಯೇ ದಸಂಸ ಕೂಡ ಯುವಜನರನ್ನು ತಯಾರು ಮಾಡಿ ಸಮಾಜಕ್ಕೆ ಸತ್ಯ ತಿಳಿಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕುವೆಂಪು ಅವರ ‘ಕಾನೂನು ಹೆಗ್ಗಡತಿ’ ಕಾದಂಬರಿಯ ನಾಯಕ ಕಡೆಗೆ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲೂ ಕುವೆಂಪು ಹಿಂದೂ- ವೈದಿಕ ಧರ್ಮವನ್ನು ಸಿಗಿದು ತೋರಣ ಕಟ್ಟಿದ್ದಾರೆ. ಅವರೊಬ್ಬ ರಸ ಋಷಿ ಅಲ್ಲ, ಕ್ರಾಂತಿಕಾರಿ ಲೇಖಕ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.