ADVERTISEMENT

ಮಂಡ್ಯ: ಎಲ್‌.ಆರ್‌.ಶಿವರಾಮೇ ಗೌಡರ ವಿರುದ್ಧ 2 ಪ್ರತ್ಯೇಕ ದೂರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 12:37 IST
Last Updated 31 ಜನವರಿ 2022, 12:37 IST
ಎಲ್‌.ಆರ್‌.ಶಿವರಾಮೇಗೌಡ
ಎಲ್‌.ಆರ್‌.ಶಿವರಾಮೇಗೌಡ   

ಮಂಡ್ಯ: ಕಾಂಗ್ರೆಸ್‌ ಮುಖಂಡ ದಿವಂಗತ ಜಿ.ಮಾದೇಗೌಡರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ಸೋಮವಾರ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.

ಗಾಂಧಿಭವನ ಟ್ರಸ್ಟ್‌ ನಿರ್ದೇಶಕ ಕೆ.ರಾಮಲಿಂಗೇಗೌಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಿಗೆ, ಯುವ ಕಾಂಗ್ರೆಸ್‌ ಮುಖಂಡ ಡಿ.ನವೀನ್‌ ಕುಮಾರ್‌ ಮದ್ದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಹರೀಶ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಹೋರಾಟಗಾರರೂ ಆಗಿದ್ದ ಜಿ.ಮಾದೇಗೌಡರು ಶಾಸಕರಾಗಿ, ಸಂಸದರಾಗಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಮೃತಪಟ್ಟ ನಂತರ ಶಿವರಾಮೇಗೌಡರು ಅವರ ವಿರುದ್ಧ ಕೆಟ್ಟ ಭಾಷೆ ಬಳಸಿ ಅಗೌರವ ತೋರಿಸಿದ್ದಾರೆ. ಒಮ್ಮೆ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾಗಿಯೂ, 20 ವರ್ಷದ ಹಿಂದೆಯೇ ಮಾದೇಗೌಡರು ಸಾಯಬೇಕಾಗಿತ್ತು ಎಂಬುದಾಗಿಯೂ ಮಾತನಾಡಿದ್ದಾರೆ. ಈ ಕುರಿತ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಶಾಂತಿ ಕದಡುವ ಮಾತುಗಳನ್ನಾಡಿರುವ ಶಿವರಾಮೇಗೌಡರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.