ADVERTISEMENT

ಶ್ರಮ, ಬದ್ಧತೆಯೇ ಯಶಸ್ಸಿನ ಕೀಲಿ ಕೈ: ರಘುನಾಥ ರೆಡ್ಡಿ

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 13:30 IST
Last Updated 18 ಮಾರ್ಚ್ 2024, 13:30 IST
ನಾಗಮಂಗಲ ಪಟ್ಟಣದ ಮಾದರಿ ಶಾಲೆಯಲ್ಲಿ ನಾಗಮಿತ್ರ ಅಕಾಡೆಮಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಸ್ಪರ್ಧಾ ಲೈನ್ ಮುಖ್ಯಸ್ಥ ರಘುನಾಥ ರೆಡ್ಡಿ ಮತ್ತು ಸಾಹಿತಿ ನಾ.ಸು.ನಾಗೇಶ್ ಉದ್ಘಾಟಿಸಿದರು
ನಾಗಮಂಗಲ ಪಟ್ಟಣದ ಮಾದರಿ ಶಾಲೆಯಲ್ಲಿ ನಾಗಮಿತ್ರ ಅಕಾಡೆಮಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಸ್ಪರ್ಧಾ ಲೈನ್ ಮುಖ್ಯಸ್ಥ ರಘುನಾಥ ರೆಡ್ಡಿ ಮತ್ತು ಸಾಹಿತಿ ನಾ.ಸು.ನಾಗೇಶ್ ಉದ್ಘಾಟಿಸಿದರು   

ನಾಗಮಂಗಲ: ‘ಯಾವುದೇ ವ್ಯಕ್ತಿಯು ಜೀವನದಲ್ಲಿ ಅಳವಡಿಸಿಕೊಳ್ಳುವ ನಿರಂತರ ಓದು, ಶ್ರಮ ಮತ್ತು ಬದ್ಧತೆಯೇ ಯಶಸ್ಸಿನ ನಿಜವಾದ ಕೀಲಿ ಕೈ’ ಎಂದು ಸ್ಪರ್ಧಾಲೈನ್ ಮುಖ್ಯಸ್ಥ ರಘುನಾಥ ರೆಡ್ಡಿ ಹೇಳಿದರು.

ಪಟ್ಟಣದ ಮಾದರಿ ಶಾಲೆಯ ಆವರಣದಲ್ಲಿ ಭಾನುವಾರ ನಾಗಮಿತ್ರ ಅಕಾಡೆಮಿಗೆ ಚಾಲನೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಯುವ ಜನತೆ ಓದಿನಿಂದ ವಿಮುಖರಾಗಿ ತಮ್ಮ ಸುಂದರ ಬದುಕನ್ನು ತಾವೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆಯಿರುತ್ತದೆ. ಯಾರು ಬುದ್ಧಿಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುವರೋ ಅವರು ಯಶಸ್ವಿಯಾಗುತ್ತಾರೆ’ ಎಂದರು.

ADVERTISEMENT

ಐ.ಎ.ಎಸ್ ಮತ್ತು ಕೆ.ಎ.ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸ್ಪರ್ಧಾರ್ಥಿಯು ಮಾಡಿಕೊಳ್ಳಬೇಕಾದ ಸಿದ್ಧತೆಯ ಕುರಿತು ಮಾಹಿತಿ ನೀಡಿದರು.

ಸಾಹಿತಿ ನಾ.ಸು.ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾದರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ನಾಗಮಂಗಲದ ಸಿ.ಕೆ.ಸುರೇಶ್ ಅವರನ್ನು ಗೌರವಿಸಲಾಯಿತು. ಕಾರ್ಯಾಗಾರದಲ್ಲಿ 55 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧಾಲೈ‌ನ್‌ನ ಪ್ರಾಣೇಶ್ ರಾಥೋಡ್, ವಿಶ್ವನಾಥ ರೆಡ್ಡಿ, ನಾಗಮಿತ್ರ ಅಕಾಡೆಮಿ ಸಂಚಾಲಕ ಮುಳಕಟ್ಟೆ ಸುರೇಶ್, ಧನಂಜಯ, ಎಂ.ಡಿ.ಶಿವಕುಮಾರ್, ಮಧು, ನಟರಾಜ್, ಎನ್.ಸಿ.ಶಿವಕುಮಾರ್, ಶಿವರಾಮ, ಸ್ವಾಮಿ, ಯೋಗೇಶ್, ಸೀಮಂತಿನಿ, ಗಾಯಿತ್ರಿ, ರಾಧಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.