ADVERTISEMENT

ಕಿಕ್ಕೇರಿ | ಹಾಳಾದ ಸೇತುವೆ: ಮರು ನಿರ್ಮಾಣಕ್ಕೆ ಗ್ರಾಮಸ್ಥರ ಪಟ್ಟು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:51 IST
Last Updated 28 ಜೂನ್ 2024, 15:51 IST
ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದ ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು. ಎ‌ಇ‌ಇ ಚಂದ್ರೇಗೌಡ, ಶ್ರೀಧರ್, ಕಾಳೇಗೌಡ, ಬಾಲರಾಜ್, ಪ್ರಶಾಂತ್, ನಾಗೇಗೌಡ, ಲಕ್ಷ್ಮಣಗೌಡ, ರಾಮೇಗೌಡ, ಗಣೇಶ್‌ಗೌಡ, ಚಂದ್ರು, ಪುಟ್ಟಸ್ವಾಮಿ, ಸಂತೋಷ್ ಭಾಗವಹಿಸಿದ್ದರು
ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದ ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು. ಎ‌ಇ‌ಇ ಚಂದ್ರೇಗೌಡ, ಶ್ರೀಧರ್, ಕಾಳೇಗೌಡ, ಬಾಲರಾಜ್, ಪ್ರಶಾಂತ್, ನಾಗೇಗೌಡ, ಲಕ್ಷ್ಮಣಗೌಡ, ರಾಮೇಗೌಡ, ಗಣೇಶ್‌ಗೌಡ, ಚಂದ್ರು, ಪುಟ್ಟಸ್ವಾಮಿ, ಸಂತೋಷ್ ಭಾಗವಹಿಸಿದ್ದರು   

ಕಿಕ್ಕೇರಿ: ನಾಲ್ಕೈದು ವರ್ಷಗಳ ಹಿಂದೆ ಹೋಬಳಿಯ ಮಾದಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕೊಂಡಿಯಾಗಿದ್ದ ಸೇತುವೆ ಕುಸಿದಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದಾಗ ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.

ಮಳೆಯಿಂದಾಗಿ ಮಣ್ಣು ಕೊರೆದು ದೊಡ್ಡ ಕೊರಕಲಾಗಿ ನಡೆದಾಡಲು ಆಗುತ್ತಿಲ್ಲ. ಇದರ ಪರಿಣಾಮ ಗ್ರಾಮದಿಂದ ಹೊರಹೋಗಲಾಗದೆ ನಾಲ್ಕೈದು ಕಿ.ಮೀ. ಸುತ್ತಿಬಳಸಿ ಪರಸ್ಥಳಕ್ಕೆ ಹೋಗುವಂತಾಗಿದೆ. ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಮನವರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್ ಮಾತನಾಡಿ, ‘ಎರಡುವರೆ ವರ್ಷಗಳ ಹಿಂದೆ ₹2.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ, ಟೆಂಡರ್ ಪ್ರಕ್ರಿಯೆ ನಡೆದಿತ್ತು. ಚುನಾವಣೆ ಬಂದ ನಂತರ ಕಾಮಗಾರಿ, ಅನುದಾನ ಬಿಡುಗಡೆ ನಿಲುಗಡೆಯಾಗಿದೆ. ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಶಾಲಾ– ಕಾಲೇಜುಗಳಿಗೆ ಮಕ್ಕಳು ತೆರಳಲು ಕಷ್ಟವಾಗಿದೆ. ರೈತರು ಮೇವು ತರಲು, ಎತ್ತಿನಬಂಡಿಯಲ್ಲಿ ಜಮೀನಿಗೆ ತೆರಳಲು, ಕಬ್ಬು, ತೆಂಗು, ಅಡಿಕೆ ಸಾಗಾಣಿಕೆ ಮಾಡಲಾಗದಂತಾಗಿದೆ’ ಎಂದರು.

‘ದೇವರಹಳ್ಳಿ, ಕಳ್ಳನಕೆರೆ ಮಾರ್ಗವಾಗಿ ಹೋಬಳಿ ಕೇಂದ್ರಕ್ಕೆ ತೆರಳಲು ಗುಂಡಿಮಯ, ಕಲ್ಲುಮಣ್ಣಿನ ರಸ್ತೆ ಸಾಕಾಗಿದೆ. ರಾತ್ರಿ ವೇಳೆ ಗ್ರಾಮಕ್ಕೆ ತೆರಳು ಹಾವು, ಚೇಳು ಕಾಟ ಕಾಡುತ್ತಿದೆ’ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು.

ಎ‌ಇ‌ಇ ಚಂದ್ರೇಗೌಡ ಮಾತನಾಡಿ, ‘ಗ್ರಾಮಸ್ಥರ ಸಮಸ್ಯೆಯ ಅರಿವಾಗಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಲು ಮೇಲಧಿಕಾರಿಗಳಿಗೆ ವಾಸ್ತವ ಸ್ಥಿತಿ ಸೂಕ್ತ ಕ್ರಮವಹಿಸಲಾಗುವುದು’ ಎಂದರು.

ಕಾಳೇಗೌಡ, ಬಾಲರಾಜ್, ಪ್ರಶಾಂತ್, ನಾಗೇಗೌಡ, ಲಕ್ಷ್ಮಣಗೌಡ, ರಾಮೇಗೌಡ, ಗಣೇಶ್‌ಗೌಡ, ಚಂದ್ರು, ಪುಟ್ಟಸ್ವಾಮಿ, ಸಂತೋಷ್ ಭಾಗವಹಿಸಿದ್ದರು.

ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದ ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು. ಎ‌ಇ‌ಇ ಚಂದ್ರೇಗೌಡ ಶ್ರೀಧರ್ ಕಾಳೇಗೌಡ ಬಾಲರಾಜ್ ಪ್ರಶಾಂತ್ ನಾಗೇಗೌಡ ಲಕ್ಷ್ಮಣಗೌಡ ರಾಮೇಗೌಡ ಗಣೇಶ್‌ಗೌಡ ಚಂದ್ರು ಪುಟ್ಟಸ್ವಾಮಿ ಸಂತೋಷ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.