ADVERTISEMENT

ಜಾಗೃತಿಗಾಗಿ ನಿರ್ದಿಂಗತ ತಂಡದಿಂದ ಕಿರುನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:00 IST
Last Updated 24 ಜೂನ್ 2024, 16:00 IST
ಭಾರತೀನಗರ ಸಮೀಪದ ಅಣ್ಣೂರು ಗ್ರಾಮದಲ್ಲಿ ನಿರ್ದಿಗಂತದ ಕಲಾವಿದರು ಸಾಮಾಜಿಕ ಕಳಕಳಿಯ ಕಿರು ನಾಟಕ ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು
ಭಾರತೀನಗರ ಸಮೀಪದ ಅಣ್ಣೂರು ಗ್ರಾಮದಲ್ಲಿ ನಿರ್ದಿಗಂತದ ಕಲಾವಿದರು ಸಾಮಾಜಿಕ ಕಳಕಳಿಯ ಕಿರು ನಾಟಕ ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು   

ಭಾರತೀನಗರ: ಸಮೀಪದ ಅಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಪ್ರಕಾಶ್‌ ರಾಜ್‌ ಸಾರಥ್ಯದ ನಿರ್ದಿಗಂತ ತಂಡದ ಕಲಾವಿದರು ಸಾಮಾಜಿಕ ಸಾಮರಸ್ಯ, ಕಳಕಳಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕಲಾವಿದರು ಕೆರೆಗಳನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ಒಂದು ಆಮೆಯ ಕಥೆ, ವರ್ಣಭೇದ ತೊಡೆದು ಹಾಕುವ ಫುಟ್‌ಬಾಲ್‌ ಆಟಗಾರ ಓಝಿಲ್‌ ಕಥೆಯಾಧಾರಿತ ಬ್ಲಾಕಿ ಸೇರಿದಂತೆ ಹಲವು ಕಿರು ನಾಟಕಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ನಿರ್ದಿಗಂತದ 10ಕ್ಕೂ ಹೆಚ್ಚು ಕಲಾವಿದರು ಕಿರು ನಾಟಕ ಪ್ರದರ್ಶಿಸಿದರು. ಸಿಆರ್‌ಪಿ ನಂದೀಶ್‌, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಂತ ನಾರಾಯಣ್‌ ಉಪಸ್ಥಿತರಿದ್ದರು.

ADVERTISEMENT

ಸಾಮರಸ್ಯದ ಜಾಗೃತಿ ಮೂಡಿಸಿದ ಕಲಾವಿದರು

ಭಾರತೀನಗರ: ಸಮೀಪದ ಅಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಪ್ರಕಾಶ್‌ ರಾಜ್‌ ಸಾರಥ್ಯದ ನಿರ್ದಿಗಂತ ಫೌಂಡೇಷನ್‌ನ ಕಲಾವಿದರು ಸಾಮಾಜಿಕ ಸಾಮರಸ್ಯ ಕಳಕಳಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕಲಾವಿದರು ಕೆರೆಗಳನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ಒಂದು ಆಮೆಯ ಕಥೆ ವರ್ಣಭೇದ ತೊಡೆದು ಹಾಕುವ ಫುಟ್‌ಬಾಲ್‌ ಆಟಗಾರ ಓಝಿಲ್‌ ಕಥೆಯಾದಾರಿ ಬ್ಲಾಕಿ ಸೇರಿದಂತೆ ಹಲವು ಕಿರು ನಾಟಕಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ನಿರ್ಧಿಗಂತ ಫೌಂಡೇಷನ್‌ನ 10ಕ್ಕೂ ಹೆಚ್ಚು ಕಲಾವಿದರು ಕಿರು ನಾಟಕ ಪ್ರದರ್ಶಿಸಿದರು. ಸಿಆರ್‌ಪಿ ನಂದೀಶ್‌ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಂತ ನಾರಾಯಣ್‌ ಸೇರಿದಂತೆ ಶಿಕ್ಷಕ ವೃಂದ ಫೌಂಢೇಷನ್‌ನ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.