ADVERTISEMENT

ಕನ್ನಡ ಚಿತ್ರರಂಗದ ಮುತ್ತು ದ್ವಾರಕೀಶ್: ಬಣ್ಣನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 15:02 IST
Last Updated 18 ಏಪ್ರಿಲ್ 2024, 15:02 IST
ಮದ್ದೂರು ಶಿವಪುರದಲ್ಲಿರುವ ಡಾ.ರಾಜಕುಮಾರ್ ರಂಗಭೂಮಿ ಕಲಾವಿದರ ಸಂಘದ ಕಚೇರಿಯಲ್ಲಿ ದಿ. ದ್ವಾರಕೀಶ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ಹೆಮ್ಮನಹಳ್ಳಿ ಪುಟ್ಟಸ್ವಾಮಿ, ಅಧ್ಯಕ್ಷ ಎ. ಕೃಷ್ಣ, ಉಪಾಧ್ಯಕ್ಷರಾದ ಶ್ಯಾಮ್ ಪ್ರಸಾದ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಶಿವರುದ್ರಾಚಾರ್ ಭಾಗವಹಿಸಿದ್ದರು

ಮದ್ದೂರು: ‘ಕನ್ನಡ ಚಿತ್ರರಂಗದ ಕಲಾವಿದರಾದ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದ ಮರೆಯಲಾಗದ ಮುತ್ತುಗಳಲ್ಲಿ ಒಬ್ಬರು’ ಎಂದು ಡಾ.ರಾಜ್ ಕುಮಾರ್ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಹೆಮ್ಮನಹಳ್ಳಿ ಪುಟ್ಟಸ್ವಾಮಿ ತಿಳಿಸಿದರು.

ಪಟ್ಟಣದ ಶಿವಪುರದಲ್ಲಿರುವ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ದ್ವಾರಕೀಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸುಮಾರು 60 ವರ್ಷಗಳಿಂದ ಕನ್ನಡಚಿತ್ರರಂಗದಲ್ಲಿ ಹೆಸರಾಂತ ಹಾಸ್ಯ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಪ್ರಚಂಡ ಕುಳ್ಳರೆಂದೇ ಹೆಸರು ಗಳಿಸಿದ್ದರು’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಎ.ಕೃಷ್ಣ ಮಾತನಾಡಿ, ‘ನೂರಾರು ಚಿತ್ರಗಳಲ್ಲಿ ಹಲವಾರು ರೀತಿಯ ಪಾತ್ರಗಳನ್ನು ಮಾಡಿ, ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ದ್ವಾರಕೀಶ್ ಅವರದಾಗಿದ್ದು ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ಯಾಮ್ ಪ್ರಸಾದ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಶಿವರುದ್ರಚಾರ್ ಹಾಗೂ ಕಲಾವಿದರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.