ADVERTISEMENT

ತಮಿಳುನಾಡಿಗೆ ಮತ್ತೆ ನೀರು: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 14:06 IST
Last Updated 20 ಡಿಸೆಂಬರ್ 2023, 14:06 IST
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಬುಧವಾರ ನಡೆದ ಉಪವಾಸದಲ್ಲಿ ರೈತರು ಪಾಲ್ಗೊಂಡರು
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಬುಧವಾರ ನಡೆದ ಉಪವಾಸದಲ್ಲಿ ರೈತರು ಪಾಲ್ಗೊಂಡರು   

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಮತ್ತೆ ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಕಾವೇರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು

ನಗರದ ಸರ್ ಎಂ.ವಿ. ಪ್ರತಿಮೆ ಎದುರು ಸರದಿ ಉಪವಾಸ ಮುಂದುವರೆದಿದ್ದು, ಬುಧವಾರ ಮಂಡ್ಯದ ಅರ್ಕೇಶ್ವರ ನಗರದ ಪ್ರೇಮಾ, ಸ್ವರ್ಣ ಸಂದ್ರದ ಪದ್ಮಾವತಿ, ಮರಿಗೌಡ ಲೇಔಟ್ ನ ಸುಜಾತ ಸಿದ್ದಯ್ಯ, ಗುತ್ತಲು ಬಡಾವಣೆಯ ತಾಯಮ್ಮ, ಕೊತ್ತತ್ತಿ ಗ್ರಾಮದ ನಾಗಮ್ಮ ಬೆಳಗೊಳದ ದೇವಿರಮ್ಮಉಪವಾಸ ನಿರತರಾಗಿ ಕಾವೇರಿ ಹೋರಾಟವನ್ನು ಬೆಂಬಲಿಸಿದರು.

‘ಕಳೆದ ಮೂರುವರೆ ತಿಂಗಳಿನಿಂದ ನಿರಂತರವಾಗಿ ನೀರು ಹರಿಸಿ ಎನ್ನುತ್ತಲೆ ಇರುವ ಸಮಿತಿ ಇದೀಗ ಜನವರಿಯಲ್ಲಿ ಪ್ರತಿ ದಿನ 1,030 ಕ್ಯೂಸೆಕ್ ನೀರು ಹರಿಸಬೇಕು ಎಂದು ಶಿಫಾರಸು ಮಾಡಿರುವುದು ಅವೈಜ್ಞಾನಿಕ’ ಎಂದು ಕಿಡಿ ಕಾರಿದರು.

ADVERTISEMENT

‘ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳಲ್ಲಿ 50.367 ಟಿಎಂಸಿ ಅಡಿ ನೀರಿದೆ. ತಮಿಳುನಾಡಿನ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಇಂತಹ ಸಂದರ್ಭದಲ್ಲಿ ನೆರೆರಾಜ್ಯಕ್ಕೆ ನಿರಂತರ ನೀರು ಹರಿಸಿದರೆ ಇಲ್ಲಿನ ಪರಿಸ್ಥಿತಿ ಯಾವ ರೀತಿ ಗಂಭೀರತೆ ಪಡೆಯಲಿದೆ ಎಂಬುದನ್ನು ರಾಜ್ಯ ಸರ್ಕಾರ ಅರಿಯಬೇಕು’ ಎಂದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.