ADVERTISEMENT

ಕೆ.ಆರ್.ಪೇಟೆ | ಆಹಾರ ಕಲಬೆರಕೆ ಶಿಕ್ಷಾರ್ಹ ಅಪರಾಧ: ಬಸವರಾಜು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 14:10 IST
Last Updated 8 ಜುಲೈ 2024, 14:10 IST

ಕೆ.ಆರ್.ಪೇಟೆ: ‘ಆಹಾರದಲ್ಲಿ ಕಲಬೆರಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು ತಿಳಿಸಿದರು.

ಪಟ್ಟಣದಲ್ಲಿ ಬೀದಿ ಬದಿ ತಳ್ಳುವ ಗಾಡಿಗಳ ಮೇಲೆ ವ್ಯಾಪಾರ ಮಾಡುವ ಸ್ಟಾಲ್‌ಗಳ, ಹೋಟೆಲ್‌ಗಳು, ಕ್ಯಾಂಟೀನ್‌ಗಳಿಗೆ ದಿಢೀರ್ ಭೇಟಿ ನೀಡಿ ಮಾತನಾಡಿ, ಸುರಕ್ಷತಾ ಕ್ರಮ ಅನುಸರಿಸುವಂತೆ ತಾಕೀತು ಮಾಡಿದರು.

‘ವಿವಿಧ ಆಹಾರ ಮಾದರಿಗಳನ್ನು ಪರಿಶೀಲಿಸಿ, ಚಾಟ್ ಉತ್ಪನ್ನಗಳ ತಯಾರಿಕಾ ಕ್ರಮಗಳನ್ನು ವೀಕ್ಷಿಸಿದರು. ಕಾನೂನು ಬಾಹಿರವಾಗಿ ಕೃತಕ ಬಣ್ಣಗಳು ಹಾಗೂ ರಾಸಾಯನಿಕ ಪದಾರ್ಥಗಳನ್ನು ಬಳಸಿ ಚಾಟ್ ಪದಾರ್ಥಗಳನ್ನು ತಯಾರಿಸುತ್ತಿದ್ದರೆ ಅಂತಹ ವರ್ತಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಆಹಾರ ಸುರಕ್ಷತೆ ಹಾಗೂ ಭದ್ರತಾ ಕಾಯ್ದೆ ಅನ್ವಯ ಚಿಕನ್ ಕಬಾಬ್, ಗೋಬಿ ಮಂಚೂರಿ ಸೇರಿದಂತೆ ಚಾಟ್‌ಗಳಿಗೆ ಬಣ್ಣ ಹಾಗೂ ರಾಸಾಯನಿಕ ಬಳಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಪಾನಿಪುರಿ ಹಾಗೂ ಚಿಕನ್ ಕಬಾಬ್ ಉತ್ಪನ್ನಗಳ ತಯಾರಿಕೆಗೆ ಕೃತಕ ಬಣ್ಣಗಳು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸದಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.