ADVERTISEMENT

ನಾಗಮಂಗಲ ತಾಲ್ಲೂಕಿನಾದ್ಯಂತ ಉತ್ತಮ ಮಳೆ: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:40 IST
Last Updated 15 ಅಕ್ಟೋಬರ್ 2024, 14:40 IST
ನಾಗಮಂಗಲ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಚನಾಯಕನಹಳ್ಳಿ ಕೆರೆಯು ತುಂಬಿ ಹರಿಯುತ್ತಿರುವುದು
ನಾಗಮಂಗಲ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಚನಾಯಕನಹಳ್ಳಿ ಕೆರೆಯು ತುಂಬಿ ಹರಿಯುತ್ತಿರುವುದು   

ನಾಗಮಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ತಾಲ್ಲೂಕಿನ ಮೋಡ ಕವಿದ ವಾತಾವರಣವಿದ್ದು, ನಂತರ ಪಟ್ಟಣದ ವ್ಯಾಪ್ತಿಯೂ ಸೇರಿದಂತೆ ತಾಲ್ಲೂಕಿನಾದ್ಯಂತ ಪ್ರಾರಂಭಗೊಂಡ ಮಳೆಯು ಮಧ್ಯಾಹ್ನದವೆರೆಗೂ ಸುರಿಯಿತು.

ಬೆಳಿಗ್ಗೆ ಸೋನೆಯಿಂದ ಆರಂಭವಾಗಿ ನಂತರ ಬಿರುಸು ಪಡೆದುಕೊಂಡು ಜೋರಾಗಿ ಸುರಿಯಿತು. ಅಲ್ಲದೇ ಮಧ್ಯಾಹ್ನ 2ರವರೆಗೂ ಮಳೆ ಮುಂದುವರಿಯಿತು. ಅಲ್ಲದೇ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಕೆ.ಮಲ್ಲೇನಹಳ್ಳಿ, ಬೀರೇಶ್ವರಪುರ, ಗದ್ದೇಭೂವನಹಳ್ಳಿ, ಬದ್ರಿಕೊಪ್ಪಲು, ಮದಲಹಳ್ಳಿ, ಸಾರೀಮೇಗಲ ಕೊಪ್ಪಲು, ತೊಳಲಿ, ಚೌಡೇನಹಳ್ಳಿ, ಉಪ್ಪಾರಹಳ್ಳಿ ಮತ್ತು ಅರಸೇಗೌಡನಕೊಪ್ಪಲು ಭಾಗಗಳಲ್ಲೂ ಮಳೆಯಾಯಿತು.

ADVERTISEMENT

ಅಲ್ಲದೇ ತಾಲ್ಲೂಕಿನ ಕಸಬಾ, ಬೆಳ್ಳೂರು ಮತ್ತು ದೇವಲಾಪುರ ಮತ್ತು ಬಿಂಡಿಗನವಿಲೆ ಹೋಬಳಿಯ ಕೆಲ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಅಲ್ಲದೇ ರಾಗಿ ಬಿತ್ತನೆ ಮಾಡಿರುವ ರೈತರಿಗೆ ಮಳೆಯು ಅನುಕೂಲವಾಗಿದ್ದು, ನಾಲ್ಕು ದಿನಗಳಿಂದಲೂ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.