ADVERTISEMENT

ಟಿಪ್ಪು ಬೆಂಬಲಿಸಿದರೆ ಜೆಡಿಎಸ್‌ ಅಡ್ರೆಸ್‌ ಇರಲ್ಲ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 12:26 IST
Last Updated 28 ಫೆಬ್ರುವರಿ 2023, 12:26 IST
   

ಮದ್ದೂರು (ಮಂಡ್ಯ ಜಿಲ್ಲೆ): ‘ಜೆಡಿಎಸ್‌ ಮುಖಂಡರು ಟಿಪ್ಪು ಬೆಂಬಲಿಸಿ ಹೇಳಿಕೆ ಕೊಟ್ಟರೆ ಆ ಪಕ್ಷ ಅಡ್ರೆಸ್‌ ಇಲ್ಲದಂತಾಗುತ್ತದೆ. ಇಂತಹ ಹೇಳಿಕೆಗಳ ಆಧಾರದ ಮೇಲೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೆಡಿಎಸ್‌ ಪಕ್ಷವನ್ನು ಹಳ್ಳ ಹಿಡಿಸುವುದಕ್ಕಾಗಿಯೇ ಸಿ.ಎಂ.ಇಬ್ರಾಹಿಂ ಟಿಪ್ಪು ಪರ ಮಾತನಾಡುತ್ತಿದ್ದಾರೆ. ಟಿಪ್ಪು ಬೇಕಾ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಬೇಕಾ ಎಂಬ ಪ್ರಶ್ನೆಗೆ ಜನರೇ ಉತ್ತರ ಕೊಡುತ್ತಾರೆ. ಪರಕೀಯ ವ್ಯಕ್ತಿಯನ್ನು ಅಭಿಮಾನಿಸುವ ಕಾಲ ಹೋಗಿದೆ, ತುಷ್ಠೀಕರಣ ರಾಜಕಾರಣ ಮಾಯವಾಗಿದೆ’ ಎಂದರು.

‘ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಕುರ್ಚಿ ಎಳೆದುಕೊಂಡು ಕುಳಿತಿದ್ದಾರೆ. ಹೀಗಾಗಿ ನಮ್ಮ ನಾಯಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ನಿವೃತ್ತಿ ಪಡೆದಿದ್ದೇನೆ ಎಂದು ಯಡಿಯೂರಪ್ಪ ಅವರು ಎಲ್ಲೂ ಹೇಳಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಅವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಾತಾಳದಿಂದ ಆಕಾಶದವರೆಗೆ ಪಕ್ಷ ಭ್ರಷ್ಟಾಚಾರ ನಡೆಸಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.